Wednesday, April 9, 2025
Google search engine

Homeರಾಜ್ಯಸಿದ್ಧಗಂಗಾ ಮಠದ ನೀರು ತುಂಬಿದ ಗೋಕಟ್ಟೆಗೆ ಬಿದ್ದು ನಾಲ್ವರು ಸಾವು

ಸಿದ್ಧಗಂಗಾ ಮಠದ ನೀರು ತುಂಬಿದ ಗೋಕಟ್ಟೆಗೆ ಬಿದ್ದು ನಾಲ್ವರು ಸಾವು

ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ಭಾನುವಾರ ಗೋಕಟ್ಟೆಯಲ್ಲಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಬಾಗಲಗುಂಟೆಯ ಲಕ್ಷ್ಮಿ(33), ಯಾದಗಿರಿ ಜಿಲ್ಲೆಯ ಅಜಲಪುರದ ಮಹದೇವಪ್ಪ (44), ರಾಮನಗರದ ಹರ್ಷಿತ್ (12), ಚಿಕ್ಕಬಳ್ಳಾಪುರದ ಶಂಕರ್ (12) ಮೃತರು.

ರಂಜಿತ್‌, ಶಂಕರ್, ಹರ್ಷಿತ್‌ ಮಠದಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದರು. ರಂಜಿತ್‌ ತಾಯಿ ಲಕ್ಷ್ಮಿ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ರಂಜಿತ್‌ ಮತ್ತು ಇಬ್ಬರು ಸ್ನೇಹಿತರ ಜತೆ ಊಟ ಮಾಡಲು ಗೋಕಟ್ಟೆಯ ಬಳಿಗೆ ತೆರಳಿದ್ದರು. ಈ ವೇಳೆ ರಂಜಿತ್‌ ಕೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದಿದ್ದು, ಆತನನ್ನು ಕಾಪಾಡಲು ಹೋಗಿ ಶಂಕರ್‌ ಮತ್ತು ಹರ್ಷಿತ್ ನೀರು ಪಾಲಾಗಿದ್ದಾರೆ.

ರಂಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೀರಲ್ಲಿ ಮುಳಿಗಿದ ಮತ್ತಿಬ್ಬರನ್ನು ರಕ್ಷಿಸಲು ಮುಂದಾದ ಲಕ್ಷ್ಮಿ, ಮಹದೇವಪ್ಪ ಸಾವನ್ನಪ್ಪಿದ್ದಾರೆ. ಲಕ್ಷ್ಮಿ, ಹರ್ಷಿತ್ ಮೃತದೇಹಗಳನ್ನ ಹೊರತೆಗೆದಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರದ ಶಾಸಕರು ಭೇಟಿ

ಘಟನಾ ಸ್ಥಳಕ್ಕೆ ತುಮಕೂರು ನಗರದ ಶಾಸಕ ಜ್ಯೋತಿ ಗಣೇಶ್ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ,ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಲ್ಲದೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದರು. ನಂತರ ಮಾತನಾಡಿ ಘಟನೆ ನಡೆಯುವ ಸ್ಥಳ ಇದಲ್ಲ ಅಚಾನಕ್ ಆಗಿ ಘಟನೆ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular