ತುಮಕೂರು: ಸಿದ್ಧಗಂಗಾ ಮಠದ ಆವರಣದಲ್ಲಿನ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎರಡು ಮೃತ ದೇಹಗಳು ಪತ್ತೆಯಾಗಿದೆ.
ಶಂಕರ್ ಹಾಗೂ ಮಹದೇವಪ್ಪ ಎಂಬುವವರ ಮೃತ ದೇಹ ಪತ್ತೆಯಾಗಿದೆ.
ಅಗ್ನಿಶಾಮಕ ದಳದ ನಿರಂತರ ಶೋಧದಿಂದಾಗಿ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ನಿನ್ನೆ ಲಕ್ಷ್ಮಿ ಹಾಗೂ ಹರ್ಷಿತ್ ನ ಮೃತದೇಹವನ್ನು ಹೊರತೆಗೆಯಲಾಗಿತ್ತು. ಇಂದು ಬೆಳಗ್ಗೆ ಇನ್ನೆರಡು ಮೃತ ದೇಹಗಳು ಪತ್ತೆಯಾಗಿದೆ.