ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ವಿದೇಶಾಂಗ ಮಂತ್ರಾಲಯದಲ್ಲಿ ನೋಂದಾವಣೆ ಮಾಡಿಸಿಕೊಳ್ಳದೆ ಅಕ್ರಮವಾಗಿ ಉದ್ಯೋಗ ಭರವಸೆ ನೀಡಿ ಉದ್ಯೋಗಿಗಳಿಂದ ಅಕ್ರಮವಾಗಿ ಹಣ ಪಡೆದು ವಿದೇಶ ಉದ್ಯೋಗದ ಆಮಿಷ ನೀಡುತ್ತಿರುವ ಏಜೆನ್ಸಿಗಳ ಮೇಲೆ ಪೊಲೀಸ್ ಆಯುಕ್ತರು ಸಂಸ್ಥೆಗಳು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮುಖಂಡ ಲಾರೆನ್ಸ್ ಆಗ್ರಹಿಸಿದ್ದಾರೆ.
ಅವರು ಇಂದು ಮಂಗಳೂರು ನಗರದ ಖಾಸಗಿ ಹೊಟೇಲ್ ಹಾಲ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಸೋಶಿಯಲ್ ಮೀಡಿಯಾಗಳ ಮುಖಾಂತರ ವಾರ್ತಾ ಪತ್ರಿಕೆಗಳ ಮುಖಾಂತರ ವಿದೇಶದಲ್ಲಿ ಉದ್ಯೋಗ ಭರವಸೆ ನೀಡುವ ಏಜೆನ್ಸಿಗಳ ಮೇಲೆ ಪೊಲೀಸರು ನಿಗಾವಹಿಸಬೇಕು ಎಂದು ಆಗ್ರಹಿಸಿದ್ದಾರೆ.