Friday, April 18, 2025
Google search engine

Homeಅಪರಾಧಉದ್ಯೋಗಿಗಳಿಗೆ ವಂಚನೆ: ರಾಬಿನ್‌ ಉತ್ತಪ್ಪ ವಿರುದ್ಧ ಬಂಧನಕ್ಕೆ ವಾರೆಂಟ್ ಜಾರಿ

ಉದ್ಯೋಗಿಗಳಿಗೆ ವಂಚನೆ: ರಾಬಿನ್‌ ಉತ್ತಪ್ಪ ವಿರುದ್ಧ ಬಂಧನಕ್ಕೆ ವಾರೆಂಟ್ ಜಾರಿ

ಬೆಂಗಳೂರು: ಉದ್ಯೋಗಿಗಳಿಗೆ ಸರ್ಕಾರಕ್ಕೆ ವಂಚನೆ ಎಸಗಿದ ಆರೋಪದಲ್ಲಿ ಟೀಂ‌ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ.

ಪಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇದೇ ತಿಂಗಳು ನಾಲ್ಕರಂದು ಅರೆಸ್ಟ್‌ ವಾರೆಂಟ್ ಜಾರಿಯಾಗಿದ್ದು ರಾಬಿನ್‌ ಉತ್ತಪ್ಪ ಪುಲಕೇಶಿ ನಗರದ ನಿವಾಸಿಯಾಗಿರುವ ಕಾರಣ ಅಲ್ಲಿನ ಠಾಣೆಗೆ ಪತ್ರ ಬರೆಯಲಾಗಿದೆ.

ಏನಿದು ಆರೋಪ?

ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯನ್ನು ಉತ್ತಪ್ಪ ನಡೆಸುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಫಿಎಫ್ ಹಣ ಪಾವತಿಸಿಲ್ಲ.

ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿಕೊಂಡು ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂ. ಪಿಎಫ್ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

RELATED ARTICLES
- Advertisment -
Google search engine

Most Popular