ಶ್ರೀ ಸುತ್ತೂರು ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಮತ್ತು ವಿವಿಧ ಸಂಘಸoಸ್ಥೆಗಳ ಸಹಯೋಗದೊಂದಿಗೆ ೨೦೨೩ರ ಜುಲೈ ೦೧ ರಿಂದ ೧೦ ರವರೆಗೆ ೧೫ನೆಯ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಹುಣಸೂರಿನ ಶ್ರೀ ಗುರುಬೂದಿಸ್ವಾಮಿಗಳವರ ಮಂಗಳ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಆದಷ್ಟು ಜಾಗ್ರತೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಸಾಮಾಜಿಕ ಸಮಸ್ಯೆಯ ಪರಿಹಾರದಲ್ಲಿ ಆಸಕ್ತಿಯುಳ್ಳವರು ಸಹ ಮದ್ಯವ್ಯಸನಿಗಳನ್ನು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ, ಭಾವಚಿತ್ರ, ಅಗತ್ಯ ಬಟ್ಟೆ ಹಾಗೂ ಹೊದಿಕೆಗಳೊಡನೆ ಕರೆದುಕೊಂಡು ಬಂದು ಶಿಬಿರಕ್ಕೆ ಸೇರಿಸಬಹುದಾಗಿದೆ.
ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಚುಂಚನಹಳ್ಳಿ ಶ್ರೀಗಳು, ಡಾ. ಎಂ.ಪಿ. ಸೋಮಶೇಖರ್ ಮತ್ತು ಶ್ರೀ ಎಸ್. ಬಸವರಾಜುಗಳವರನ್ನು ಕ್ರಮವಾಗಿ ೯೯೪೫೪೯೪೬೧೨, ೯೪೪೮೬೫೩೮೯೭ ಮತ್ತು ೯೮೮೬೪೭೬೧೪೨ ದೂರವಾಣಿಗಳಲ್ಲಿ ಸಂಪರ್ಕಿಸಲು ಕೋರಿದೆ.
ಮದ್ಯಪಾನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ಮನಗಂಡು ಸಾರ್ವಜನಿಕರಲ್ಲಿ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ ಮದ್ಯ ವ್ಯಸನ ಮುಕ್ತರಾಗಿಸಲು ಹಲವಾರು ವರ್ಷಗಳಿಂದ ಶಿಬಿರಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಇದುವರೆಗೆ ೧೪ ಶಿಬಿರಗಳು ನಡೆದಿವೆ.