ಮೈಸೂರು : ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಎರಡು ದಿನ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿಯಾಗಿದ್ದು, ಸುಮಾರು ೬೦ ಜನ ಹೃದಯರೋಗಿಗಳೀಗೆ ಸ್ಟಂಟ್ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|| ಕೆ.ಎಸ್. ಸದಾನಂದ್ ತಿಳಿಸಿದರು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮೆಡ್ಟಾçನಿಕ್ಸ್ ಅಮೇರಿಕಾ ಹಾಗೂ ಡಾ. ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಪೌಂಡೇಷನ್ ವಿಸ್ಕಿನ್‌ಸನ್ ಅಮೇರಿಕಾರವರ ಸಹಯೋಗದೊಂದಿಗೆ ನಡೆದ ಕಾರ್ಯಾಗಾರ ನಿರ್ದೇಶಕರಾದ ಪದ್ಮಶ್ರೀ ಡಾ|| ಸಿ.ಎನ್. ಮಂಜುನಾಥ್‌ರವರ ಆದೇಶದಂತೆ ಯಶಸ್ವಿಯಾಗಿ ನಡೆದಿದೆ ಎಂದರು.
ಅಮೇರಿಕಾದ ಡಾ|| ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಪೌಂಡೇಷನ್‌ನ ಡಾ|| ಸುಬ್ರಹ್ಮಣಿ ಮಾತನಾಡಿ ನಾನು ಮೈಸೂರಿನಲ್ಲಿ ಹುಟ್ಟಿ ಬೆಳೆದು ವೈದ್ಯನಾಗಿ ಕಳೆದ ೧೪ ವರ್ಷಗಳಿಂದ ಕನ್ನಡನಾಡಿನ ಜನರ ಸೇವೆ ಮಾಡುತ್ತಿದ್ದೆನೆ. ಈ ಭಾರಿಯು ೨೫೦ ಸ್ಟಂಟ್‌ಗಳನ್ನು ಉಚಿತವಾಗಿ ನೀಡಿದ್ದೇನೆ. ಯು.ಎಸ್.ಎ. ನಲ್ಲಿರುವ ಅಡ್ವಾನ್ಸ್ ಟೆಕ್ನಾಲಜಿಗಿಂತಲೂ ಉತ್ತಮವಾದ ಸೇವೆ ಜಯದೇವ ಆಸ್ಪತ್ರೆಯಲ್ಲಿ ಸಿಗುತ್ತಿದ್ದು, ಇಷ್ಟೊಂದು ದೊಡ್ಡ ಹೃದಯರೋಗಿಗಳ ಆಸ್ಪತ್ರೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಆದರೆ ಇದು ಆಶ್ಚರ್ಯಕರವಾಗಿದೆ. ಡಾ|| ಸಿ.ಎನ್. ಮಂಜುನಾಥ್‌ರವರ ನೇತೃತ್ವದಲ್ಲಿ ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ವೈದ್ಯರುಗಳು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ೩ ಜನ ಬಡರೋಗಿಗಳಿಗೆ ಧನ ಸಹಾಯ ಮಾಡಿದರು.
ಈ ಕಾರ್ಯಾಗಾರದಲ್ಲಿ ಡಾ|| ಸಂತೋಷ್, ಡಾ|| ವೀಣಾನಂಜಪ್ಪ, ಡಾ|| ಶ್ರೀಧರ್, ಡಾ|| ಜಯಶೀಲನ್, ಡಾ|| ನಿಖಿಲ್, ಡಾ|| ಭಾರತಿ, ಡಾ|| ದಿನೇಶ್, ನರ್ಸಿಂಗ್ ಅಧೀಕ್ಷಕರಾದ ಹರೀಶ್‌ಕುಮಾರ್, ಪಿ.ಆರ್.ಓ. ವಾಣಿಮೋಹನ್, ಶುಶ್ರೂಷಕರಾದ ಗುರುಮೂರ್ತಿ, ಸತೀಶ್, ಬಾಲರಾಜ್, ಪ್ರತಾಪ್, ಮಹಾದೇವಿ, ದೀಪಿಕಾ ಭಾಗವಹಿಸಿದ್ದರು.