ಬಾಗಲಕೋಟೆ: ಶಕ್ತಿ ಯೋಜನೆ ಘೋಷಣೆಯಾದ ಎರಡನೇ ದಿನವಾದ ಇಂದು ಮಹಿಳೆ ಹಾಗೂ ಕಂಡಕ್ಟರ್ ನಡುವೆ ಜಟಾಪಟಿ ನಡೆದಿದೆ.
ಲಗೇಜ್ ವಿಚಾರವಾಗಿ ಮಹಿಳೆ ಹೈಡ್ರಾಮಾ ಮಾಡಿರುವ ಘಟನೆ ಇಳಕಲ್ ನಗರ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಪ್ರತಿ ದಿನ ವಿವಿಧ ಗ್ರಾಮಗಳಿಗೆ ತೆರಳಿ ಬಾಂಡೆ ವಸ್ತುಗಳನ್ನು ಮಹಿಳೆಯರು ಮಾರಾಟ ಮಾಡುತ್ತಾರೆ. ಅಂತೆಯೇ ಇಂದು ಐದಾರು ಸೀಟ್ ಗಳ ಮೇಲೆ ಲಗೇಜ್ ಹಾಕಿ ಮಹಿಳೆಯರು ಕುಳಿತಿದ್ದು, ಇದನ್ನು ನೋಡಿದ ಕಂಡಕ್ಟರ್ ಪ್ರಶ್ನಿಸಿದ್ದಾರೆ.
ನಿಮಗೆ ಬಸ್ ಫ್ರೀ ಇದೆ. ಆದ್ರೆ, ಲಗೇಜ್ ಗಳಿಗೆ ಫ್ರೀ ಇಲ್ಲ. ಲಗೇಜ್ ಮಾಡಿಸಿ, ಬಸ್ ಮೇಲೆ ಹಾಕಿ ಎಂದು ಕಂಡಕ್ಟರ್ ತಿಳಿಸಿದ್ದಾರೆ.
ಅದಕ್ಕೆ ಒಪ್ಪದ ಮಹಿಳೆ. ಲಗೇಜ್ ಬಸ್ ಒಳಗಡೆ ಇಡುವೆ ಎಂದು ತಕರಾರು ತೆಗೆದಿದ್ದಾಳೆ.
ಸೀಟ್ ಮೇಲೆ ಬೇಡ. ಮಧ್ಯದಲ್ಲಿ ಇಡು ಅಂದ್ರು ಒಪ್ಪದ ಮಹಿಳೆಯ ಲಗೇಜ್ ಕೆಳಗೆ ಇಟ್ಟು ಮಹಿಳೆಯನ್ನು ಬಿಟ್ಟು ಕಂಡಕ್ಟರ್ ತೆರಳಿದ್ದಾರೆ.
ಈ ವೇಳೆ ಕಂಟ್ರೋಲರ್ ಮಧ್ಯಪ್ರವೇಶಿಸಿದ್ದು, ಮಹಿಳೆ ಹಾಗೂ ಲಗೇಜ್ ನ್ನು ಬೇರೆ ಬಸ್ ನಲ್ಲಿ ಇಟ್ಟು ಮಹಿಳೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.