ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಮೇಟಿ ಕುಪ್ಪೆಯಲ್ಲಿಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿಗಳಾದ ಡಾ. ಬೃಂದಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಿ , ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.

ಈ ಕಾರ್ಯ ಕ್ರಮವನ್ನು ಉದ್ದೇಶಿಸಿ ದಂತ ತಜ್ಞರಾದ ಡಾ” ಸಮಿವುಲ್ಲಾ ಶರೀಫ್ ರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ದಂತ ಆರೋಗ್ಯದ ಬಗ್ಗೆ ಮಾಹಿತಿ ಮೂಡಿಸಿ ದಂತ ಆರೋಗ್ಯ ದ ಮಹತ್ವ ತಿಳಿಸುವುದು ಮತ್ತು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ಸವಲತ್ತು ಜನರಿಗೆ ತಿಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ನಂತರ ನಮ್ಮ ಬಾಯಿಯ ಆರೋಗ್ಯ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಹಿಡಿದ ಹಾಗೆ .ಉತ್ತಮ ರೀತಿಯಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಂಡರೆ ,ದೈಹಿಕವಾಗಿಯೂ ಆರೋಗ್ಯವಂತರಾಗಿರಬಹುದು 45 ವರ್ಷ ಮೇಲ್ಪಟ್ಟು ಬಿಪಿಎಲ್ ಕಾರ್ಡ್ ಹೊಂದಿರುವವರು ಹಾಗೂ 3ರಿಂದ 4 ಹಲ್ಲುಗಳನ್ನು ಕಳೆದುಕೊಂಡವರು ಈ ಯೋಜನೆಯ ಫಲಾನುಭವಿಗಳು.ಎಚ್ ಡಿ ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೀಟಿ ಪಡೆದು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಹೋಗಬೇಕು ,ಅಲ್ಲಿ ಕೃತಕ ದಂತ ಪಂಥವನ್ನು ಜೋಡಿಸಲಾಗುತ್ತದೆ ಎಂದರು.
ನಂತರ ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಗಳು ಮಾತನಾಡಿ ಎಲ್ಲಾರು ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತವನ್ನು ಸ್ವಚ್ಛಗೊಳಿಸಬೇಕು. ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಬೇಕು ಎಂದು ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸರಳ ,ರವಿರಾಜ್,ನಾಗೇಶ್ ,ಮಾನಸ ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲೆ ಶಿಕ್ಷಕರು,ಸಾರ್ವಜನಿಕರು,ಮಕ್ಕಳು ಹಾಜರಿದ್ದರು.