Friday, April 11, 2025
Google search engine

Homeರಾಜ್ಯಸುದ್ದಿಜಾಲಕಾರ್ತಿಕ ಮಾಸ ಹಾಗೂ ತುಳಸಿ ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ಉಚಿತ ತುಳಸಿ ಗಿಡ ವಿತರಣೆ

ಕಾರ್ತಿಕ ಮಾಸ ಹಾಗೂ ತುಳಸಿ ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ಉಚಿತ ತುಳಸಿ ಗಿಡ ವಿತರಣೆ

ಮೈಸೂರು : ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಹಾಗೂ ತುಳಸಿ ಹಬ್ಬದ ಪ್ರಯುಕ್ತ ತುಳಸಿ ಕಟ್ಟೆಗೆ ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸಿ ನಂತರ
ಭಕ್ತಾದಿಗಳಿಗೆ ಉಚಿತ ತುಳಸಿ ಗಿಡ ವಿತರಿಸಿ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ತುಳಸಿಗಿಡವು ಹಿಂದೂ ಧರ್ಮದಲ್ಲಿನ ಜನರಿಗೆ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ ಹಾಗೇ ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ ಎಂದು ತಿಳಿಸಿ ಗಿಡದಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ 100 ತುಳಸಿ ಗಿಡಗಳನ್ನು ಭಕ್ತಾದಿಗಳಿಗೆ ವಿತರಿಸಿದರು. ಇದೇ ಸಂದರ್ಭದಲ್ಲಿ ನವೀನಾಕ್ಷ, ಜಯಮ್ಮ, ಶ್ರೀನಿವಾಸ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular