ಮಂಡ್ಯ: ಉಚಿತ ಗ್ಯಾರೆಂಟಿ ವಿಚಾರವಾಗಿ ತಮ್ಮ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿ ಮಾತನಾಡಿದ ಅವರು, ಎಲ್ಲರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ಕೊಡುತ್ತಾರೆ. ಅದೇ ರೀತಿ ನಾವು ಚುನಾವಣೆಯಲ್ಲಿ ಭರವಸೆ ಕೊಟ್ಟಿದ್ದೇವೆ. ಇದೀಗ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿದ್ದೇವೆ. ಆದರೆ ತಮಿಳುನಾಡು ತರಹ ಉಚಿತ ಯೋಜನೆ ಜಾಸ್ತಿ ಆಯ್ತು ಅಂತ ಜನ ಹೇಳುತ್ತಾರೆ ಎಂದು ಹೇಳಿದರು.
ನಾವು ಗಿಮಿಕ್ ಅಂತ ಹೇಳಿಲ್ಲ ಅದ್ಯಾಕೆ ಸುಮ್ನೆ ಏನೇನೊ ಮಾತಾಡುತ್ತೀರಿ. ಬಿಜೆಪಿಯವರು ವೈರಲ್ ಅಲ್ದೇ ಇನ್ನೊಂದು ಮಾಡೋಕೆ ಹೇಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಮ್ಮ ಹೇಳಿಕೆ ವಿಚಾರವನ್ನು ಪ್ರಶ್ನಿಸಿದಕ್ಕೆ ಮುನಿಸಿಕೊಂಡರು.