ಹುಣಸೂರು: ರೋಟರಿ ಕ್ಲಬ್ ಮತ್ತು ಹುಣಸೂರು ಅಪೊಲೋ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ದಿನಾಂಕ 03.09.2025 ಬುಧವಾರ ಹಮ್ಮಿಕೊಳ್ಳಲಾಗಿದೆ.
ನಗರದ ರೋಟರಿ ಭವನದಲ್ಲಿ ನುರಿತ ವೈದ್ಯರಾದ ಡಾ.ಕವಿತಾ ಬಿ. ಇವರಿಂದ ಮಹಿಳೆಯರಿಗೆ ಸರ್ವೆಕಲ್ ಕ್ಯಾನ್ಸರ್ ಹಾಗೂ ಜನರಲ್ ಬಿಪಿ, ಶುಗರ್, ಜತೆಗೆ ಮಕ್ಕಳ ತಜ್ಞರಿಂದ, ಮಕ್ಕಳ ತಪಾಷಣೆ 10.ರಿಂದ ಮಧ್ಯಾಹ್ನ1.30.ರವರೆಗೆ ಇರುತ್ತದೆ.
ನಗರ ಮತ್ತು ತಾಲ್ಲೂಕಿನ ಮಹಿಳೆಯರು ಈ ಉಚಿತ ಆರೋಗ್ಯ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿ ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುನಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.