ವರದಿ ಎಡತೊರೆ ಮಹೇಶ್
ಹೆಚ್.ಡಿ. ಕೋಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ , ಐಟಿಸಿ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಹೆಚ್.ಡಿ.ಕೋಟೆ, ತಾಲ್ಲೂಕು ಪಂಚಾಯಿತಿ,ಹೆಚ್.ಡಿ.ಕೋಟೆ. ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹೆಚ್.ಡಿ.ಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ,ಗ್ರಾಮ ಪಂಚಾಯಿತಿ ಸ್ವಚ್ಛತಾಗಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಧರಣೇಶ್ ,ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್ ರವರು ಅಧ್ಯಕ್ಷತೆ ಯನ್ನುವಹಿಸಿ ಗಿಡಕ್ಕೆ ನೀರನ್ನುಹಾಕುವುದರ ಮೂಲಕ ಉದ್ಘಾಟಿಸಿ ದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ರವರು ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತಾ ಗಾರರ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ, ಆದುದರಿಂದ ಅವರ ಆರೋಗ್ಯವು ಮುಖ್ಯ, ನೀವುಗಳು ಆರೋಗ್ಯವಾಗಿದ್ದರೆ ಗ್ರಾಮ ಸ್ವಚ್ಛತವಾಗಿರುತ್ತದೆ ಆದುದರಿಂದ ಎಲ್ಲರೂ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ ಹಾಗೂ ಚಿಕಿತ್ಸೆಯನ್ನು ಪಡೆಯಿರಿ ಎಂದು ತಿಳಿಸಿದರು.

ನಂತರ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಾದ ಧರಣೇಶ್ ರವರು ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇವರ ಕೆಲಸವು ಬಹಳ ಮುಖ್ಯವಾಗಿದೆ. ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸುವುದರಲ್ಲಿ ಇವರ ಪಾತ್ರ ಮುಖ್ಯವಾಗಿದೆ. ಇವರು ಗ್ರಾಮಗಳನ್ನು ಸ್ವಚ್ಛತೆ ಮಾಡುತ್ತಾರೆ. ಹಾಗೂ ಮನೆ ಮನೆಗೆ ಹೋಗಿ ಕಸವನ್ನು ಸಂಗ್ರಹಿಸುತ್ತಾರೆ, ಆದ್ದರಿಂದ ಈ ದಿನ ಇವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಮಹಾಲಕ್ಷ್ಮಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಳಾದ, ಅಶೋಕ, ಅರಳಪ್ಪ, ರವಿರಾಜ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ರೀಣಾ ಲೋಬೋ, ವಿದ್ಯಾ, ಆಶಾ ಚಕ್ರವರ್ತಿ, ತಾಲ್ಲೂಕು ಪಂಚಾಯಿತಿ ಕಚೇರಿಯ, ಪುರುಷೋತ್ತಮ್ ಎನ್ ಆರ್ ಎಲ್ , ಸುಹಾಸ್ ,ರವೀಶ್, ಸ್ವಚ್ಛತಗಾರರು ಇನ್ನಿತರರು ಹಾಜರಿದ್ದರು,