ಮೈಸೂರು: ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ದ ವತಿಯಿಂದ ಮಾತಾ ಅಮೃತಾ ಕೃಪಾ ಆಸ್ಪತ್ರೆ ಆಶ್ರಯದಲ್ಲಿ ಸ್ವಚ್ಚ ಹಾಗೂ ಆರೋಗ್ಯ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ, ತೈರಾರ್ಡ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ಮಾತಾ ಅಮೃತಾ ಕೃಪಾ ಆಸ್ಪತ್ರೆಯ ಸುಸಜ್ಜಿತ ಚಲಿಸುವ ಆಸ್ಪತ್ರೆ ವಾಹನೊದಳಗೆ ಇಸಿಜಿ, ಎಕ್ಸ್ ರೇ, ಸ್ಕ್ಯಾನಿಂಗ್ ಸೇರಿದಂತೆ ಹಲವಾರು ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯರಾದ ಶ್ರೀಮತಿ ಡಾ|| ಸೌಮ್ಯ ರವರು ಇಂದು ಭಾರತವನ್ನು ಹಲವಾರು ರೋಗಗಳು ಕಾಡುತ್ತಿವೆ ಮಧುಮೇಹ ಮತ್ತು ಕ್ಯಾನ್ಸರ್ 40 ವರ್ಷ ಒಳಪಟ್ಟವರಲ್ಲು ಈಗ ಕಾಣಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಭಾರತ ಸರ್ಕಾರವು ಕ್ಯಾನ್ಸರ್ ತಡೆಗಟ್ಟಲು ಹಲವಾರು ಲಸಿಕೆಗಳನ್ನು ಪೋಷಿಸುತ್ತಿದೆ ಮಹಿಳೆಯರು ಅದನ್ನು ಪಡೆಯಲು ಸಲಹೆ ನೀಡಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅನುಕೂಲ ಪಡೆದರು. ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್. ಗಣೇಶ್ ರವರು ದೀಪಾವಳಿಯ ಪ್ರಯುಕ್ತ ಎಲ್ಲರಿಗೂ ದೀಪಗಳ ವಿತರಣೆ ಮಾಡಿದರು.
ಕಾರ್ಯಕ್ರಮ ಆಯೋಜನೆ ಮಾಡಿದ ಪುನೀತ್ ಜಿ ಕೂಡ್ಲೂರು ಮಾತನಾಡಿ ವಿಶ್ವ ಹಿಂದೂ ಪರಿಷತ್ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಹಯೋಗದಲ್ಲಿ ಸ್ವಚ್ಚ ಹಾಗೂ ಆರೋಗ್ಯ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ನಾವೆಲ್ಲರೂ ಆರೋಗ್ಯವಾಗಿ ಇರಬೇಕು, ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ನಮ್ಮ ಬಡಾವಣೆಗೆ ಪ್ರತಿ ದಿನ ಸ್ವಚ್ಚ ಸೇವೆ ನೀಡುವ ಪೌರಕಾರ್ಮಿಕರು ಆಹ್ವಾನಿತರು ಎಲ್ಲಾ ತರಹದ ಇನ್ಫೆಕ್ಷನ್ ಗಳಿಗೆ ಮೊದಲು ಗುರಿಯಾಗುವವರೆ ಅವರು, ಅವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ನೀಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತಿಳಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ರಾಮಕೃಷ್ಣರವರು ವೈದ್ಯರಾದ ಶ್ರೀಮತಿ ಸೌಮ್ಯ ಹಾಗೂ ತಂಡಕ್ಕೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಕಾರ್ಯದರ್ಶಿ ಮಧುಶಂಕರ್, ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್ ಗಣೇಶ್, ನಿರ್ದೇಶಕರಾದ ಶುಭಾ ಅರುಣ್, ಪೂಜಾ, ಉಪಾಧ್ಯಕ್ಷ ರಾಮಕೃಷ್ಣ, ನಾಗಭೂಷಣ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.