ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿಶೇಷ ಚೇತನರ ಬಗ್ಗೆ ಪ್ರಸ್ತುತ ದಿನಗಳಲ್ಲಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳುವಂತೆ ಡಿಡಿಪಿಐ ಜವರೇಗೌಡ ಹೇಳಿದರು.
ಕೆ.ಆರ್.ನಗರದಲ್ಲಿ ನಡೆದ 2024 25 ನೇ ಸಾಲಿನ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಂಕನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿಶೇಷ ಚೇತನರಿಗೆ ಅನುಕಂಪ ತೋರಿಸುವುದರ ಬದಲು ಬದುಕಿಗೆ ಬೇಕಾದ ಅವಕಾಶಗಳನ್ನು ಒದಗಿಸುಕೊಡಿ ಇದರಿಂದ ಅವರು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪರವರು ಮಾತನಾಡಿ ಈ ದಿನದ ವೈದ್ಯಕೀಯ ಮೌಲ್ಯಂಕನ ಶಿಬಿರ ವಿಶೇಷ ಚೇತನ ಮಕ್ಕಳಿಗೆ ತಪಾಸಣೆ ನಡೆಸಿ ಸಾಧನ ಸಲಕರಣೆ ನೀಡುತ್ತಿರುವುದು, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರುವುದಾಗಿದೆ ಎಂದ ಅವರು ಪೋಷಕರು ವಿಶೇಷ ಚೇತನ ಮಕ್ಕಳನ್ನು ಸಮಾಜಕ್ಕೆ ಭಾರ ಎಂಬುದನ್ನು ಮರೆತು ಅವರ ಪೋಷಣೆ ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸ್ವಾಮಿ ಗೌಡ, ಬಿ.ಅರ್.ಸಿ. ವೆಂಕಟೇಶ್ ವೈದ್ಯಾಧಿಕಾರಿಗಳಾದ ಡಾ.ಗೌತಮ್ ಡಾ. ಮಾಧವ್ RBSK ತಂಡದ ವೈದ್ಯಾಧಿಕಾರಿಗಳು, ಅಲಿಂಕೋ ತಂಡ, ಮೈಸೂರಿನ DIC ವೈದ್ಯಾಧಿಕಾರಿಗಳು ಇದ್ದರು.
ಈ ಸಂದರ್ಭದಲ್ಲಿ ಶಿಕ್ಷಕ ರಿಜ್ವಾನ್, CDPO ಅಣ್ಣಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪೂರ್ಣಿ ರಾಜಶೇಖರ್, ಶಂಕರೇಗೌಡ, ವಿಶೇಷ ಚೇತನ ಸಂಘದ ಅಧ್ಯಕ್ಷರಾದ ನಾರಾಯಣಶೆಟ್ಟಿ, ಗೌರವಧ್ಯಕ್ಷರಾದ ನಾಗರಾಜು, GGMS ಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ, BIERT ಗಳಾದ ನಾಗರಾಜು ,ಪ್ರೇಮ, ಸಿಆರ್‌ಪಿ ವಸಂತ್ ಕುಮಾರ್, ಉದಯಕುಮಾರ್, ವಿಶೇಷ ಚೇತನ ಮಕ್ಕಳು ಮತ್ತು ಪೋಷಕರು ಹಾಜರಿದ್ದರು.