Saturday, April 19, 2025
Google search engine

Homeಸ್ಥಳೀಯಅಕ್ಟೋಬರ್ 6, 7 ರಂದು ಉಚಿತ ಡ್ರೋನ್ ಶೋ: ವೀಕ್ಷಣೆಗೆ ಮುಕ್ತ ಅವಕಾಶ

ಅಕ್ಟೋಬರ್ 6, 7 ರಂದು ಉಚಿತ ಡ್ರೋನ್ ಶೋ: ವೀಕ್ಷಣೆಗೆ ಮುಕ್ತ ಅವಕಾಶ

ಮೈಸೂರು: ದಸರಾ ವೈಭವದಲ್ಲಿ ಡ್ರೋಣ್ ಶೋ ಮತ್ತಷ್ಟು ಮೆರುಗು ನೀಡಲಿದ್ದು ನಾಳೆ ನಾಳಿದ್ದು (ಅಕ್ಟೋಬರ್ 6 ಮತ್ತು 7 ರಂದು)ಉಚಿತವಾಗಿರುತ್ತದೆ. ಎರಡು ದಿನಗಳ ಕಾಲ ಡ್ರೋನ್ ಶೋಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು ಯಾವುದೇ ಪಾಸ್ ಇರುವುದಿಲ್ಲ.ಆದ್ದರಿಂದ ಈ ಬಾರಿಯ ದಸರಾ ದೀಪಾಲಂಕಾರವನ್ನು ಮತ್ತಷ್ಟು ಆಕರ್ಷಣೆ ಮಾಡಲು ಡ್ರೋನ್ ಶೋ ಆಯೋಜನೆ ಮಾಡಲಾಗಿದೆ.

ಡ್ರೋಣ್ ಶೋ ವಿಶೇಷ ಅನುಭವ ನೀಡಲಿದೆ. ಅಕ್ಟೋಬರ್ 6 ಮತ್ತು 7 ರಂದು ಉಚಿತವಾಗಿ ಡ್ರೋಣ್ ಶೋ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 11 ಹಾಗೂ 12 ರಂದು ಪಾಸ್ ಮೂಲಕ ಗ್ರೌಂಡ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ ಎಂದು ಚೆಸ್ಕಾನ ತಾಂತ್ರಿಕ ನಿರ್ದೇಶಕ ಮುನಿ ಗೋಪಾಲರಾಜು ಮಾಹಿತಿ ನೀಡಿದ್ದಾರೆ.

ದಸರಾ ಉಪ ಸಮಿತಿ ಸದಸ್ಯರಿಗೆ ಅಕ್ಟೋಬರ್ 3ರಂದು‌ ರಾತ್ರಿ 7:30ರ ಸುಮಾರಿಗೆ ಪತ್ರ ತಲುಪಿತು. ಹಾಗಾಗಿ ನಾವು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದಸ್ಯರ ಹೆಸರು ಪ್ರಕಟವಾಗುತ್ತಿದ್ದಂತೆ ಎಲ್ಲರೂ ಕಾರ್ಯಪ್ರವೃತ್ತರಾಗಿದ್ದೇವೆ. ಚೆಸ್ಕಾಂನ ಆಡಳಿತ ವರ್ಗ ದಸರಾ ದೀಪಾಲಂಕಾರಕ್ಕಾಗಿ ಹೆಚ್ಚು ಶ್ರಮ ವಹಿಸಿದೆ.
ಈ ಬಾರಿಯ ದಸರಾ ದೀಪಾಲಂಕಾರ ತುಂಬಾ ಚೆನ್ನಾಗಿದೆ ಎಂದು ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಸೈಯ್ಯದ್ ಇಕ್ಬಾಲ್ ಮಾಹಿತಿ ನೀಡಿದ್ದಾರೆ.


RELATED ARTICLES
- Advertisment -
Google search engine

Most Popular