ಮೈಸೂರು: ಮೈಸೂರು ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ನಗರದ ಕುಂಬಾರಕೊಪ್ಪಲಿನ ಪಶು ಆಸ್ಪತ್ರೆಯಲ್ಲಿ ಇಂದು ಭಾನುವಾರ ಸಾಕುಪ್ರಾಣಿಗಳಿಗೆ ಉಚಿತ ರೇಬೀಸ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮ.ಪು.ಪೂರ್ಣಾನಂದ, ಮಹಾನಗರಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ, ಉಷಾ ಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಗೋಪಿನಾಥ, ಜಾನುವಾರು ಅಧಿಕಾರಿ ರಾಮಲಿಂಗಯ್ಯ, ಪಶುವೈದ್ಯಕೀಯ ಪರೀಕ್ಷಕರಾದ ಕೃಷ್ಣಯ್ಯ, ಹರೀಶ್, ಫಿರ್ದೋಸ್ ಉಪಸ್ಥಿತರಿದ್ದರು.
