Friday, April 18, 2025
Google search engine

Homeಅಪರಾಧಸರಕು ಸಾಗಾಣಿಕೆ ಟೆಂಪೋ ಡಿಕ್ಕಿ:ಬಾಲಕಿ ಸಾವು

ಸರಕು ಸಾಗಾಣಿಕೆ ಟೆಂಪೋ ಡಿಕ್ಕಿ:ಬಾಲಕಿ ಸಾವು

ಮದ್ದೂರು:ಸರಕು ಸಾಗಾಣಿಕೆ ಟೆಂಪೋ ಹಿಂದಕ್ಕೆ ಸಂಚರಿಸುವ ವೇಳೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನಪ್ಪಿದ ಘಟನೆ ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷದ ರೀಫಾ ಸಾವನ್ನಪ್ಪಿದ ದುರ್ದೈವಿ ಬಾಲಕಿ ಯಾಗಿದ್ದು, ಹಾಲು ತರಲು ಹೊಗಿದ್ದ ಬಾಲಕಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವುದು ದುರ್ದೈವದ ಸಂಗತಿಯಾಗಿದೆ.
ಸರ್ವರ್ ಖಾನ್ ಗ್ರಾಮದ ರಾಜಶೇಖರ್ ರವರ ಮನೆಯಲ್ಲಿ ಬಾಡಿಗೆಗೆ ಇದ್ದರು, ಇವರ ಪುತ್ರಿ ರೀಫಾ ದಿನನಿತ್ಯದಂತೆ ಹಾಲು ತರಲು ಡೈರಿಗೆ ಬೆಳಿಗ್ಗೆ ಹೋಗಿದ್ದಳು. ಹಾಲು ಖರೀದಿಸಿ ಮನೆಗೆ ಪಾಪಸ್ಸಾಗುವಾಗ ರಸ್ತೆಯಲ್ಲಿ ನಿಂತಿದ್ದ ಮಹೇಂದ್ರ ಮಿನಿ ಗೂಡ್ಸ್ ವಾಹನ ( KA06-AB-0154)ವನ್ನು ಚಾಲಕ ಗಂಗಾಧರ್ ಹಿಂದಕ್ಕೆ ಚಲಾಯಿಸುತ್ತಿದ್ದು,ಹಿಂದೆ ಇದ್ದ ಬಾಲಕಿಗೆ ಡಿಕ್ಕಿ ಹೊಡೆದಿದೆ,ನೆಲಕ್ಕೆ ಬಿದ್ದ ಬಾಲಕಿಯ ಮೇಲೆ ವಾಹನದ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.
ಬಾಲಕಿ ಪೋಷಕರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು, ಚಾಲಕನ ಅಜಾಗರೂಕತೆ ವಿರುದ್ಧ ಆಕ್ರೋಶಿಸಿದ ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು,ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular