ಹುಣಸೂರು: ಸ್ನೇಹಕಿಂತ ಮಿಗಿಲಾದ ಸ್ನೇಹಸಂಬಂಧ ಮತ್ತೊಂದು ಈ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ರೊ.ಜಿ.ವಿ.ಶ್ರೀನಾಥ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ದಿನದ ಆಚರಣೆಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಸಂಸ್ಥೆ ರೋಟರಿಯಲ್ಲಿ ಸ್ನೇಹ, ವಿಶ್ವಾಸ, ಪ್ರೀತಿ, ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದು, ಭಾವನೆಗಳ ತವರು ರೋಟರಿ ಎಂದರು.

ಇಂದಿಗೂ ಸ್ನೇಹ ಅಮರವಾಗಿ ನಿಂತಿದೆ ಎಂದರೆ ದಿನನಿತ್ಯದ ಬದುಕಿನ ನಡುವೆ. ಸ್ನೇಹ ಬಂದಿಗಳಾಗಿ ರೂಪಗೊಂಡಿರುವುದು ಸ್ನೇಹ ಚಿಲುಮೆ ಮಾತ್ರ. ಹಾಗೆ ಸ್ವಾರ್ಥವಿಲ್ಲದೆ ಜೀವಿಸುವ ಜೀವಿಗಳಲ್ಲಿ ಸ್ನೇಹಿತರು ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಸ್ನೇಹದಿಂದ ಶುರುವಾಗುವ ರೋಟರಿ ಹಸ್ತಲಾಘವ. ಚಿರಕಾಲ ಸ್ನೇಹ ಸೇತುವೆಯಾಗಿ ಉಳಿಯಲಿದೆ. ಆದ್ದರಿಂದಲೇ ರೋಟರಿ ಕ್ಲಬ್ ಮಾದರಿಯಾಗಿ, ವಿಶ್ವದೆತ್ತರಕ್ಕೆ ಬೆಳೆಯಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಹಿರಿಯ ಸದಸ್ಯರಾದ ಆನಂದ್ ಆರ್. ರಾಜಶೇಖರ್, ರೊ.ಬಸವರಾಜು, ರೊ.ಚಿಲ್ಕುಂದ ಮಹೇಶ್, ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ ಹಾಗೂ ಶ್ರೀ ನಿವಾಸ್ ಇದ್ದರು.