ಚಾಮರಾಜನಗರ: ಸ್ನೇಹ ಅಮರವಾದದ್ದು. ಉತ್ತಮ ಸ್ನೇಹಕ್ಕೆ ಬಡವ- ಶ್ರೀಮಂತ, ಜಾತಿ ಭೇದವಿಲ್ಲ. ಉತ್ತಮ ಗುಣ ಒಂದು ಭಾವನೆಯ ಹೃದಯ ಅಂತರಾಳದ ಒಂದು ಶಕ್ತಿಯೇ ಸ್ನೇಹವನ್ನು ಶಾಶ್ವತವಾಗಿ ಉಳಿಸಿ ಬೆಳೆಸುತ್ತದೆ ಎಂದು ಸಂಸ್ಕೃತಿ ಚಿಂತಕ, ಜೈ ಹಿಂದ್ ಪ್ರತಿಷ್ಠಾನದಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸ್ನೇಹ ದಿನಾಚರಣೆ ಅಂಗವಾಗಿ ಸ್ನೇಹ ರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸ ,ನಂಬಿಕೆ, ಕರುಣೆ, ಪ್ರೀತಿ, ಕಷ್ಟ ಸುಖಗಳ ಹಂಚಿಕೆ, ಅಂತರಾಳದ ವಿಚಾರಗಳ ವಿನಿಮಯ ಸ್ನೇಹಕ್ಕೆ ಇದೆ. ಸ್ನೇಹ ಬಹಳ ಗಟ್ಟಿಯಾದದ್ದು ಮತ್ತು ಶಾಶ್ವತವಾದದ್ದು. ಕ್ಷುಲ್ಲಕ ಕಾರಣಕ್ಕೆ ಸ್ನೇಹವನ್ನು ಕಳೆದುಕೊಳ್ಳದೆ ಸದಾ ಕಾಲ ಸುಖ ಶಾಂತಿ ನೆಮ್ಮದಿಯಿಂದ ಪ್ರತಿಯೊಬ್ಬರು ಬದುಕೋಣ. ಬಡವ ಶ್ರೀಮಂತ ನಿನ್ನದೇ ನಾವೆಲ್ಲರೂ ಸ್ನೇಹಕ್ಕೆ ಬೆಲೆ ನೀಡಿ ಗೌರವಿಸೋಣ. ಉತ್ತಮ ಗುಣವಂತರ ಸ್ನೇಹಕ್ಕೆ ಅಪಾರ ಮೌಲ್ಯವಿದೆ.
ವ್ಯಕ್ತಿತ್ವ ವಿಕಾಸದಲ್ಲಿ ಸ್ನೇಹಿತರ ಪಾತ್ರವಿದೆ. ಶಿಕ್ಷಣದ ಜೊತೆಗೆ ಜೀವನದಲ್ಲಿ ಬದುಕುವ ಸಂದರ್ಭದಲ್ಲಿ ಉತ್ತಮ ಸ್ನೇಹಿತರ ಮಾರ್ಗದರ್ಶನ ಸಲಹೆ, ಸಹಕಾರ, ಪ್ರೀತಿ-ವಿಶ್ವಾಸ ಮೂಲಕ ಸನ್ಮಾರ್ಗದಲ್ಲಿ ನಡೆಯುವಂತಹ ಅವಕಾಶ ಸಿಗಲಿ ಎಂದು ಪ್ರಾರ್ಥಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮಸ್ವಾಮಿಯವರು ಸ್ನೇಹ ಮಾನವನ ವಿಕಾಸದಿಂದಲೂ ರೂಢಿಯಲ್ಲಿದೆ .ಪರಸ್ಪರ ಜೀವನ ಮೌಲ್ಯವೇ ಸ್ನೇಹವಾಗಿದೆ. ಧರ್ಮಗಳಲ್ಲಿ ,ಪುರಾಣಗಳಲ್ಲಿ ಸ್ನೇಹಕ್ಕೆ ಮೌಲ್ಯವನ್ನು ಕಟ್ಟಲು ಸಾಧ್ಯವಿಲ್ಲವೆಂಬ ಅನೇಕ ಕಥೆಗಳನ್ನು ಪಾತ್ರಗಳನ್ನು ನೋಡಿದ್ದೇವೆ. ಆಧುನಿಕ ಪ್ರಪಂಚದಲ್ಲಿ ಸ್ನೇಹವೂ ವಿಶ್ವ ವ್ಯಾಪಿಯಾಗಿ ಬೆಳೆದಿದೆ. ಆದರೂ ಬಾಲ್ಯದ ಗೆಳೆಯರನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಸ್ನೇಹವನ್ನು ಗೌರವಿಸೋಣ ,ಪ್ರೀತಿಸೋಣ. ಋಗ್ವೇದಿ ಯೂತ್ ಕ್ಲಬ್ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಸ್ನೇಹ ಭಾವದ ಸ್ನೇಹ ರಕ್ಷಾ ಕಾರ್ಯಕ್ರಮ ರೂಪಿಸಿರುವುದು ಹೆಮ್ಮೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಅನ್ನಪೂರ್ಣ, ಋಗ್ವೇದಿ ಯೂತ್ ಕ್ಲಬ್ ಶರಣ್ಯ ವೈಷ್ಣವಿ, ಶಾರ್ವರಿ ,ಶ್ರಾವ್ಯ, ವೈಭವ್ ನಯನ ,ಜ್ಞಾನವರ್ಧಿನಿ, ಶಿವು ಇದ್ದರು.