Friday, April 18, 2025
Google search engine

Homeಸ್ಥಳೀಯಮಳೆಗಾಗಿ ಕಪ್ಪೆಗಳಿಗೆ ಮದುವೆ

ಮಳೆಗಾಗಿ ಕಪ್ಪೆಗಳಿಗೆ ಮದುವೆ


ಹನಗೊಡು: ಹೋಬಳಿಯ ಚಿಕ್ಕೇಗೌಡ ಕೊಪ್ಪಲಿನ ಯುವಕರು ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ.
ಕಳೆದ ಒಂದು ತಿಂಗಳಿಂದ ಸಮರ್ಪಕವಾಗಿ ಮಳೆಯಾಗದೆ ಬೆಳೆಯೆಲ್ಲಾ ಒಣಗುತ್ತಿರುವುದರಿಂದ ತಮ್ಮ ಗ್ರಾಮ ದೇವತೆಗಳ ಮೊರೆ ಹೋಗಿ ಎರಡು ಕಪ್ಪೆಗಳನ್ನು ಹಿಡಿದು ತಂದು ಮಧುಮಕ್ಕಳಂತೆ ಸಿಂಗರಿಸಿ, ನಾನಾ ಪೂಜೆ ವಿಧಿ ವಿಧಾನದಿಂದ ಮದುವೆ ಮಾಡಿದರು. ಹೆಣ್ಣು ಕಪ್ಪೆ (ಮಧುಮಗಳು)ಕಡೆಗೆ ಮತ್ತೆ ಕೆಲವರು ಗಂಡು ಕಪ್ಪೆ (ಮಧುಮಗ) ಕಡೆಗೆ ಇದ್ದು ಮಧುವೆಯ ಎಲ್ಲ ವಿಧಿಗಳನ್ನು ಪೂರೈಸಿ
ಮದುವೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹನಗೋಡು ಹೋಬಳಿಯಾದ್ಯಂತ ಕಳೆದ ಒಂದು ತಿಂಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಈ ಭಾಗದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಮಳೆಗಾಗಿ ರೈತರು ನಾನಾ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಈ ಭಾಗದಲ್ಲಿ ತಂಬಾಕು, ಶುಂಠಿ, ಮುಸುಕಿನ ಜೋಳ, ಮರಗೆಣಸು ಹತ್ತಿ ಹಾಗೂ ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಕೆ ಗ್ರಾಮಗಳಲ್ಳಿ ಮಳೆಯ ಆರ್ಭಟ ಜೋರಾಗಿದ್ದರೆ, ಕೆಲ ಭಾಗದಲ್ಲಿ ಮಳೆ ದರ್ಶನವಾಗದೇ ಬರಿ ಗಾಳಿ ಬೀಸುತ್ತಿದೆ. ಇದರಿಂದ ಬೆಳೆಗಳೆಲ್ಲ ಒಣಗುವ ಹಂತಕ್ಕೆ ಬಂದಿವೆ. ಬಿತ್ತನೆಗಾಗಿ ನಾನಾ ಕಡೆ ಸಾಲ ಮಾಡಿ ಬೀಜ ಗೊಬ್ಬರ ಕೊಂಡು ತಂದಿದ್ದ ರೈತರಲ್ಲಿ ಸಾಲದ ಸುಳಿಯಲ್ಲಿ ಸಿಲುಕುವ ಭೀತಿಯಲ್ಲಿದ್ದಾರೆ.
ಕಪ್ಪೆ ಮದುವೆಯಲ್ಲಿ ಗ್ರಾಮದ ಗಣೇಶ್ ನಿಂಗೇಗೌಡ ರಾಮಕೃ?ಗೌಡ ಅಪ್ಪಾಜಿಗೌಡ ಸೇರಿದಂತೆ ಇತರರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular