ಚಿತ್ರದುರ್ಗ: ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮೇರೆಗೆ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾದರು. ಇಂದು ಸೋಮವಾರ ಪೊಲೀಸರು ಮುರುಘಾ ಶ್ರೀಗಳಿಗೆ ಚಿತ್ರದುರ್ಗ ಬಂಧಿಖಾನೆಯಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಎವಿಡೆನ್ಸ್ ನಡೆಯಲಿರುವ ಹಿನ್ನೆಲೆ ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆಯಲಿದೆ. ಜೂ.೧೦,೧೧ ಮತ್ತು ೧೨ ಮೂರು ದಿನ ನ್ಯಾಯಾಲಯದಿಂದ ಸಾಕ್ಷಿ ವಿಚಾರಣೆ ನಡೆಯಲಿದೆ.
ಫೊಕ್ಸೋ ಪ್ರಕರಣದ ಸಂತ್ರಸ್ತೆ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಸಲ್ಲಿಸಲಾದ ದೂರು ಇಂತಹದ್ದೊಂದು ಅನುಮಾನ ಮೂಡಲು ಕಾರಣವಾಗಿದೆ. ಮುರುಘಾಶ್ರೀ ಬೆಂಬಲಿಗರು ಸಂತ್ರಸ್ತೆಯ ಚಿಕ್ಕಪ್ಪನಿಗೆ ಆಮಿಷವೊಡ್ಡಿ ಸಾಕ್ಷ್ಯ ನುಡಿಯದಂತೆ ಹಾಗೂ ನೀಡಿದ ದೂರು ವಾಪಸ್ಸು ಪಡೆಯುವಂತೆ ಸಂತ್ರಸ್ತೆಯ ಮೇಲೆ ಪ್ರಭಾವ ಬೀರಿದರಾ ಎಂಬ ಮತ್ತೊಂದು ಪ್ರಶ್ನೆ ಎದುರಾಗಿದೆ.
ಮೇ ೨೪ರಂದು ಚಿತ್ರದುರ್ಗ ತೊರೆದು ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿದ್ದ ಸಂತ್ರಸ್ತೆ. ಅಲ್ಲಿ ತಮ್ಮ ಚಿಕ್ಕಪ್ಪ ನೀಡುತ್ತಿರುವ ಕಿರುಕುಳದ ಬಗ್ಗೆ ಸುದೀರ್ಘವಾಗಿ ತಿಳಿಸಿದ್ದಳು. ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸಂತ್ರಸ್ತೆಯನ್ನು ಕರೆದೊಯ್ದು ದೂರು ದಾಖಲಿಸಿ, ನಂತರ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದರು.