Saturday, April 12, 2025
Google search engine

HomeUncategorizedರಾಷ್ಟ್ರೀಯಇನ್ಮುಂದೆ 20 ಕಿ.ಮೀ ಒಳಗೆ ಸಂಚಾರ ಮಾಡಿದ್ರೆ ಟೋಲ್ ದರ ಉಚಿತ

ಇನ್ಮುಂದೆ 20 ಕಿ.ಮೀ ಒಳಗೆ ಸಂಚಾರ ಮಾಡಿದ್ರೆ ಟೋಲ್ ದರ ಉಚಿತ

2008ರ ರಾಷ್ಟ್ರೀಯ ಹೆದ್ದಾರಿ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ

ನವದೆಹಲಿ: ಟೋಲ್ ದರ ಕಟ್ಟಿ, ಕಟ್ಟಿ ಸುಸ್ತಾಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಕಲೆಕ್ಷನ್ ನಿಯಮ ಬದಲಾಗಿದೆ. ಇನ್ಮುಂದೆ 20 ಕಿ.ಮೀ ಒಳಗೆ ಸಂಚಾರ ಮಾಡಿದ್ರೆ ಟೋಲ್ ದರ ಕಟ್ಟುವಂತಿಲ್ಲ.

2008ರ ರಾಷ್ಟ್ರೀಯ ಹೆದ್ದಾರಿ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಹೊಸ ನಿಯಮದ ಪ್ರಕಾರ ಟೋಲ್ ದರ ವಾಹನಗಳು ಸಂಚರಿಸುವ ದೂರದ ಮೇಲೆ ಅವಲಂಬಿಸುತ್ತದೆ. ವಾಹನಗಳು ಚಲಿಸುವ ದೂರವನ್ನು GPS ಮೂಲಕ ಪರಿಶೀಲಿಸಲಿದ್ದು, ಅದರ ಅನ್ವಯ ದರ ನಿಗದಿ ಮಾಡಲಾಗುತ್ತಿದೆ. ಈ ಹೊಸ ನಿಯಮ GPS ಆಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ.

ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೊದಲ 20 ಕಿ.ಮೀ ಉಚಿತವಾಗಿ ಪ್ರಯಾಣಿಸಬಹುದು. 20 ಕಿ.ಮೀ ಒಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರಮಿಸಿದ್ರೆ ಯಾವುದೇ ಟೋಲ್ ದರ ಇರುವುದಿಲ್ಲ. 20 ಕಿ.ಮೀ ನಂತರ ಸಂಚರಿಸುವ ಖಾಸಗಿ ವಾಹನಗಳಿಗೆ ಟೋಲ್ ದರ ಅನ್ವಯವಾಗುತ್ತದೆ.

20 ಕಿ.ಮೀ ಒಳಗಿನ ಟೋಲ್ ದರ ಖಾಸಗಿ ವಾಹನ ಮಾಲೀಕರಿಗೆ ದುಬಾರಿಯಾಗಿತ್ತು. ಈ ಸಮಸ್ಯೆ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 20 ಕಿ.ಮೀ ವರೆಗೆ ಉಚಿತ ಪ್ರಯಾಣ ಘೋಷಣೆಯಿಂದ ಖಾಸಗಿ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular