ಮೈಸೂರು: ನಿರ್ದಿಗಂತ ನಿರ್ಮಾಣದಲ್ಲಿ ಗಾಯನಗಳು ಎಂಬ ನಾಟಕ ಜು.29 ರಿಂದ ಮೈಸೂರಿನಿಂದ ಮೈಸೂರಿನಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ 60 ದಿನಗಳ ಕಾಲ ರಾಜ್ಯಾದ್ಯಂತ ನಾಟಕ ಪ್ರದರ್ಶನ ಎಂದು ನಟ ಪ್ರಕಾಶ್ ರಾಜ್ ಅವರು ಪ್ರಕಟಿಸಿದರು. ಶ್ರೀರಂಗಪಟ್ಟಣ ಬಳಿಯ ಕೆ.ಶೆಟ್ಟಿಹಳ್ಳಿಯ ನಿರ್ದಿಗಂತ ತೋಟದ ಮನೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.29ರ ಸಂಜೆ 6ಕ್ಕೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಮೊದಲ ಪ್ರದರ್ಶನ, ಆ.1ರ ಸಂಜೆ 7ಕ್ಕೆ ಕಲಾಮಂದಿರದ ಕಿರುರಂಗ ಮಂದಿರದಲ್ಲಿ 2ನೇ ಪ್ರದರ್ಶನ. ನಂತರ ಈ ರಂಗಪಯಣ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಸಂಚರಿಸಲಿದೆ ಎಂದು ಹೇಳಿದರು.
ಡಾ.ಶ್ರೀಪಾದ ಭಟ್ ಅವರ ಧ್ವನಿ, ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕ ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪಕವಾಗಿದೆ. ಇದರಲ್ಲಿ 15 ಮಂದಿ ಕಲಾವಿದರು ಅಭಿನಯಿಸಿದ್ದು, ಶ್ವೇತಾರಾಣಿ ಹಾಸನ ಸಹ ನಿರ್ದೇಶನ, ಅನುಷ್ ಶೆಟ್ಟಿ, ಮುನ್ನ, ಸುನ್ನುತ ಮೈಸೂರು ಸಂಗೀತ ಸಂಯೋಜಿಸಿದ್ದಾರೆ. ಗಾಯಗಳು: ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ಜಾಗತಿಕ ಯುದ್ದ, ಕೋಮುಗಲಭೆ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಕಥಾ ಹಂದರ ಹೊಂದಿದ್ದು, ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆ ಕುರಿತಾಗಿ ಬಿಂಬಿತವಾಗಿರುವ ನಾಟಕವಾಗಿದೆ. ಗಾಯಗಳು ಎಂದರೆ, ಗಲಾಟೆ, ಕೋಮುಗಲಭೆ ಸೇರಿದಂತೆ ಹಲವು ಯುದ್ಧ ಹಿಂಸಾಚಾರದ ನೋವಿನ ಪ್ರದರ್ಶನಗಳ ಬಗ್ಗೆ. ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಕಲಹಗಳ ಬಗ್ಗೆ ಜನರೇ ಅರಿತಿದ್ದಾರೆ ಎಂದು ಹೇಳಿದರು. ಕಲೆ ಒಂದು ನಮ್ಮ ಭಾಷೆ, ಈ ಭಾಷೆಯ ಮೂಲಕ ನಾವು ತೋರಿಸುತ್ತಿಲ್ಲ. ರಾಜ್ಯದ ನಾನಾ ಕಡೆಗಳಲ್ಲಿ ಕಲಾವಿದರನ್ನು ಪ್ರೋತ್ಸಾಹಿಸಲು ನಿರ್ದಿಗಂತ ಸಂಸ್ಥೆ ಮುಂದಾಗಿದೆ. ಮಣಿಪುರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಹತ್ಯೆಯಿಂದ ನೋವಾಗಿರುವ ಹೆಣ್ಣು ಮಗಳು ನಮ್ಮ ಮನೆಯವಳು ಎಂದುಕೊಳ್ಳಬೇಕು. ನಮ್ಮ ಬೆರಳಿಗೆ ಪೆಟ್ಟಾದರೆ ಮಾತ್ರ ಅದು ನಮಗೆ ಗಾಯ. ಅದೇ ಏಕಲವ್ಯನ ಬೆರಳಿಗಾದರೆ ಅದು ಸಮಾಜಕ್ಕಾದ ಗಾಯ. ಪ್ರಸ್ತುತ ವಿದ್ಯಾಮಾನದ ವಸ್ತುಸ್ಥಿತಿಯನ್ನು ರಂಗಭೂಮಿಯ ಭಾಷೆಯ ಮೂಲಕ ತಿಳಿಸಲು ಹೊರಟಿದ್ದೇವೆ ಎಂದು ಅವರು ವಿವರಿಸಿದರು. ರಂಗಕರ್ಮಿ ಡಾ.ಶ್ರೀಪಾದ ಭಟ್, ಪ್ರೀತಿ ನಾಗರಾಜ್, ಉತ್ಸವ ಗೋನವಾರ ಇಬ್ಬರು.