ಮಂಡ್ಯ:ಮಂಡ್ಯ ಸಿಟಿಗೂ ಕಾಡಾನೆಗಳು ಎಂಟ್ರಿಕೊಟ್ಟಿದ್ದು, ರಾತ್ರಿ ಇಡೀ ಮಂಡ್ಯ ಸಿಟಿಯಲ್ಲಿ ಎರಡು ಕಾಡಾನೆಗಳು ಫುಲ್ ರೌಂಡ್ ಹಾಕಿದೆ.
ನಗರದ ಕಲ್ಲಹಳ್ಳಿ ,ವಿವಿ ನಗರ ಭಾಗದಲ್ಲಿ ಆನೆಗಳ ಸಂಚಾರ ಕಂಡು ಬಂದಿದ್ದು, ಮಧ್ಯರಾತ್ರಿ ನಾಯಿ ಬೊಗಳುತ್ತಿದ್ದದ್ದನ್ನು ಕೇಳಿ ಹೊರಬಂದ ನಿವಾಸಿಗಳಿಗೆ ಶಾಕ್ ಆಗಿದೆ.
ಕಳೆದ ಎರಡು ಮೂರು ದಿನಗಳಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಆನೆಗಳು ಬೀಡು ಬಿಟ್ಟಿದ್ದು, ಸದ್ಯ ಮಂಡ್ಯದ ಸದ್ವಿಧ್ಯ ಸ್ಕೂಲ್ ಬಳಿಯ ಕಬ್ಬಿನ ತೋಟದಲ್ಲಿ ಇದೆ. ಮತ್ತೆ ಸಿಟಿಯೊಳಗೆ ಬಂದಿರುವ ಕಾಡಾನೆಗಳನ್ನು ಕಂಡು ಮಂಡ್ಯ ಜನರಲ್ಲಿ ಆತಂಕ ಮನೆ ಮಾಡಿದೆ.