ವರದಿ :ಸ್ಟೀಫನ್ ಜೇಮ್ಸ್.
ಲೈಬ್ರರಿ ಮೇಲ್ವಿಚಾರಕರಿಗೆ ಸಿಗದ ಪೂರ್ಣ ವೇತನ.ಗ್ರಾಮೀಣ ಗ್ರಂಥಾಲಯ (ಅರಿವು ಕೇಂದ್ರ)ದ ಮೇಲ್ವಿಚಾರಕರಿಗೆ ಸರ್ಕಾರ ಮೂರು ತಿಂಗಳಿಗೊಮ್ಮೆ ವೇತನ ಬಿಡುಗಡೆ ಮಾಡುತ್ತಿದೆ. ಆದರೆ, ಅದು ಮೇಲ್ವಿಚಾರಕರ ಕೈ ಸೇರುವುದು ನಾಲ್ಕೆದು ತಿಂಗಳ ಬಳಿಕ. ಜತೆಗೆ ಪಂಚಾಯಿತಿ ಪಾಲಿನ ವೇತನ ಸಮರ್ಪಕವಾಗಿ ಪಾವತಿಯಾಗದ ಮೇಲ್ವಿಚಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮ ಮಟ್ಟದಲ್ಲಿ ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಜನರನ್ನು ಸಿದ್ಧಗೊಳಿಸುವ ಸದುದ್ದೇಶದಿಂದ ತೆರೆಯಲಾದ ಗ್ರಂಥಾಲಯ ಪಂಚಾಯಿತಿ ಕೈಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಅರಿವು ಕೇಂದ್ರದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸೇವಾ ಭದ್ರತೆಯೂ ಇಲ್ಲ, ಪೂರ್ಣ ಪ್ರಮಾಣದ ವೇತನವು ಇಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಪಂ ಸಿಬ್ಬಂದಿ ಎಂದು ಗುರುತಿಸಿಕೊಂಡರು ಸರ್ಕಾರದ ಸೌಲಭ್ಯಗಳು ಇವರಿಗೆ ಮರಿಚೀಕೆಯಾಗಿವೆ.
480 ಮೇಲ್ವಿಚಾರಕರಿಗೆ ಸಂಕಷ್ಟ:ಸರ್ಕಾರ ೨೦೨೩ರಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಯಾಗಿದೆ. ಮಾಸಿಕ ೧೨ ಸಾವಿರ ರೂ. ಸರ್ಕಾರ ನೀಡಿದರೆ, ೭,೨೦೧ ಗ್ರಾಪಂ ವಸೂಲಿ ಮಾಡುವ ತೆರಿಗೆ ಶೇ.೬ರ ಗ್ರಂಥಾಲಯ ಕರದಲ್ಲಿ ನೀಡುವಂತೆ ನಿಗದಿ ಪಡಿಸಿದೆ. ಸರ್ಕಾರದಿಂದ ನೀಡುವ ಹಣ ಮೂರು ತಿಂಗಳಿಗೊಮ್ಮೆ ಪಾವತಿಯಾದರೆ, ಪಂಚಾಯಿತಿ ಪಾಲಿನ ೭,೨೦೧ ರೂ. 16 ತಿಂಗಳಿನೊಳಗೆ ಬಿಡುಗಡೆ ದಿನಾಂಕ 480 ಮೇಲ್ವಿಚಾರಕರಿಗೆ ಸಂಕಷ್ಟ ಬಂದೊದಗಿದೆ.ಹೆಚ್ಚಿನ ಕೆಲಸದ ಒತ್ತಡ:ಗ್ರಂಥಾಲಯ ಮೇಲ್ವಿಚಾರಕರಿಗೆ ಗ್ರಂಥಾಲಯದೊಂದಿಗೆ ಗ್ರಾಪಂ ಕರ ವಸೂಲಿ, ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುತ್ತಿದೆ. ವೇತನ ಪಂಚಾಯಿತಿ ಅಧಿಕಾರಿ ಕೈಯಲ್ಲಿ ಕಡ್ಡಾಯವಾಗಿ ಒತ್ತಡದಲ್ಲಿ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಾರೆ.
-ವೇತನಕ್ಕಾಗಿ ಅಲಿಯಬೇಕುಸರ್ಕಾರದಿಂದ ನೀಡುವ ಹಣ ಗ್ರಾಪಂ ಸಿಬ್ಬಂದಿ ಖಾತೆಗೆ ಜಮೆಯಾಗುತ್ತದೆ. ಮೂರು ತಿಂಗಳ 36 ಸಾವಿರ ರೂ. ವೇತನದ ಹಣಕ್ಕಾಗಿ ಪಿಡಿಒ, ಗ್ರಾಪಂ ಅಧ್ಯಕ್ಷರ ಮುಂದೆ ಮೇಲ್ವಿಚಾರಕರು ಕೈಕಟ್ಟಿ ನಿಲ್ಲಬೇಕು. ಕೆಲವು ಪಂಚಾಯಿತಿಗಳು ಹಣ ನೀಡದೆ ಸತಾಯಿಸುವುದು ಸಾಮಾನ್ಯವಾಗಿದೆ. ಜೊತೆಗೆ ಪಂಚಾಯಿತಿ ಪಾಲಿನ ಹಣವನ್ನೂ ನೀಡದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂಬುದು ಗ್ರಂಥಾಲಯ ಮೇಲ್ವಿಚಾರಕರ ಅಳಲು.
ಬಾಕಿ ಇರುವ ಪಂಚಾಯಿತಿ ಪಾಲಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕನಿಷ್ಠ ವೇತನ ಏಕರೂಪದಲ್ಲಿ ನೇರವಾಗಿ ಸರ್ಕಾರ ಮೇಲ್ವಿಚಾರಕರ ಖಾತೆಗೆ ಪ್ರತಿ ತಿಂಗಳು ಜಮೆ ಮಾಡಬೇಕು. ಈ ಕುರಿತು ಸರ್ಕಾರದ ಬಜೆಟ್ನಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು.| ರಮೇಶ ಪಾಂಡವಜಿಲ್ಲಾಧ್ಯಕ್ಷ, ಗ್ರಂಥಾಲಯ ಮೇಲ್ವಿಚಾರಕರ ಸಂಘ, ಬೆಳಗಾವಿ



