Saturday, April 26, 2025
Google search engine

Homeವಿದೇಶಇಂದು ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

ಇಂದು ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

ವ್ಯಾಟಿಕನ್ ಸಿಟಿ: ಅನಾರೋಗ್ಯದಿಂದ ಸೋಮವಾರ ನಿಧನರಾದ ಕ್ರಿಶ್ಟಿಯನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು (ಏ.26) ನಡೆಯಲಿದೆ.

ವ್ಯಾಟಿಕನ್ ಸೆಂಟ್ ಪೀಟರ್ಸ್ ಬ್ಯಾಸಿಲಿಕಾದ ಎದುರು ಸ್ಥಳೀಯ ಕಾಲಮಾನ 10 ಗಂಟೆಗೆ ಪೋಪ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಫ್ರಾನ್ಸಿಸ್ ಅವರ ಇಚ್ಛೆಯಂತೆ ಮೃತದೇಹವನ್ನು ವ್ಯಾಟಿಕನ್ ಹೊರಗಡೆಯಿರುವ ಸೆಂಟ್ ಮೇರಿ ಬ್ಯಾಸಿಲಿಕಾದಲ್ಲಿ ಸಮಾಧಿ ಮಾಡಲಾಗುವುದು.

ಇನ್ನು ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪೋಪ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಕೆಜೆ ಜಾರ್ಜ್, ಐವಾನ್ ಡಿಸೋಜಾ ಪಾಲ್ಗೊಳ್ಳುತ್ತಿದ್ದಾರೆ.

ರೋಮನ್ ಕ್ಯಾಥೋಲಿಕ್ ಚರ್ಚ್ನ ಮೊದಲ ಲ್ಯಾಟಿನ್ ಅಮೆರಿಕದ ಧರ್ಮಗುರುಗಳಾದ ಪೋಪ್ ಅನಾರೋಗ್ಯದ ಕಾರಣ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಹಾಜರಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೋಪ್ ಕಾಣಿಸಿಕೊಂಡಿದ್ದರು. ವೈದ್ಯರು ಪೋಪ್ ಫ್ರಾನ್ಸಿಸ್ ಅವರಲ್ಲಿ ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿದ್ದರು.

RELATED ARTICLES
- Advertisment -
Google search engine

Most Popular