Sunday, April 20, 2025
Google search engine

Homeಸ್ಥಳೀಯತ್ಯಾಜ್ಯ ವಸ್ತುಗಳಿಂದ ತಯಾರಾದ ಮೊಗಸಾಲೆ, ಪೀಠೋಪಕರಣಗಳು

ತ್ಯಾಜ್ಯ ವಸ್ತುಗಳಿಂದ ತಯಾರಾದ ಮೊಗಸಾಲೆ, ಪೀಠೋಪಕರಣಗಳು

ಮೈವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗಗೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು  NASA(National Association of Students of Architecture) ವತಿಯಿಂದ ಆಯೋಜಿಸುವ ಸ್ಪರ್ಧೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 66 th ANDC (Annual NASA Design Competition) ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅದಕ್ಕಾಗಿ ಸ್ಪರ್ಧೆಯ ನಿಯಮಾನುಸಾರ ತ್ಯಾಜ್ಯಾ ವಸ್ತುಗಳನ್ನು ಉಪಯೋಗಿಸಿ ಒಂದು ಮೊಗಸಾಲೆ ಮತ್ತು ಪೀಠೋಪಕರಣಗಳನ್ನು ಮೈಸೂರಿನ ವಿಜಯನಗರದಲ್ಲಿರುವ ಉದ್ಯಾನವನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನು ಉದ್ಯಾನವನದಲ್ಲಿರುವ ಶಿಶುವಿಹಾರದ ಪಕ್ಕದಲ್ಲಿ ನಿರ್ಮಾಣ ಮಾಡಿರುವುದರಿಂದ ಮಕ್ಕಳು, ಪೋಷಕರು ಮತ್ತು ಉದ್ಯಾನವನಕ್ಕೆ ವ್ಯಾಯಾಮ ಮಾಡಲು, ವಿಶ್ರಾಂತಿ ಪಡೆಯಲು ಮತ್ತು ಮನಃಶಾಂತಿಗಾಗಿ ಇಲ್ಲಿಗೆ ಬರುವ ಎಲ್ಲರಿಗೂ ಬಹಳ ಉಪಯೋಗವಾಗುತ್ತದೆ.

ಇದನ್ನು 25 ವಿದ್ಯಾರ್ಥಿಗಳು ಪೋಷಕರ ಸಹಾಯದೊಂದಿಗೆ ಸತತ ಪರಿಶ್ರಮ ಹಾಗೂ ಆಸಕ್ತಿಯಿಂದ ಕಳೆದ 10 ದಿನಗಳಿಂದ ನಿರ್ಮಿಸುತ್ತಿದ್ದಾರೆ. ಇದನ್ನು ಸೆ. 29 ರಂದು ಲೋಕಾರ್ಪಣೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular