ಗದಗ: ಹಸಿದು ಬಂದ ಮಂಗನಿಗೆ ಹೋಟೆಲ್ ಮಾಲೀಕ ಪೂರಿ ತಿನ್ನಿಸಿ ಮಾನವೀಯತೆ ಮೆರೆದಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ಪಟ್ಟಣದ ನ್ಯೂ ಶ್ರೀ ಲಕ್ಷ್ಮಿ ಹೋಟೆಲ್ ಮಾಲೀಕ ಪದ್ಮನಾಭ ಶೆಟ್ಟಿ ಪೂರಿ ತಿನ್ನಿಸಿದವರು.
ಹೊಟೆಲ್ ಮುಂದೆ ಬೆಳಿಗ್ಗೆ ಬೈಕೊಂದರ ಮೇಲೆ ಕುಳಿತ ಮಂಗ ಆಹಾರಕ್ಕಾಗಿ ಹೊಟೆಲ್ ನತ್ತ ನೋಡುತ್ತಾ ಕುಳಿತಿತ್ತು. ಇದನ್ನು ಗಮನಿಸಿದ ಹೊಟೆಲ್ ಮಾಲೀಕ ಶನಿವಾರ ಸಾಕ್ಷಾತ್ ಆಂಜನೇಯನೇ ಬಂದಿದ್ದಾನೆಂದು ಖುಷಿಯಿಂದಲೇ ಆಹಾರ ನೀಡಿದ್ದಾರೆ.
ಹಸಿದ ಮಂಗ ಪೂರಿ ಸೇವಿಸಿ ಅಲ್ಲಿಂದ ತೆರಳಿದೆ.