ಹನೂರು: ಕೆ.ಎಸ್ ಆರ್.ಟಿ.ಸಿ ಬಸ್ ಗೆ ಎದುರಾಗಿ ಬಂದ ಗಜರಾಜನ ಆರ್ಭಟಕ್ಕೆ ಬೆಚ್ಚಿ ಬಿದ್ದ ಪ್ರಯಾಣಿಕರ ಪ್ರಾಣವನ್ನು ಬಸ್ ಚಾಲಕ ಉಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ತಾಳಬೆಟ್ಟ ಪೊನ್ನಾಚಿ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಸೋಮವಾರ ಬೆಳಗ್ಗೆ ಪ್ರಯಾಣಿಕರಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬರುವಾಗ ಎದುರಿಗೆ ಬಂದ ಕಾಡಾನೆ ಬಸ್ ನ ಮೇಲೆ ದಾಳಿ ಮಾಡಲು ಬಂದಾಗ ಬಸ್ ನಲ್ಲಿದ್ದ ಪ್ರಯಾಣಿಕರು ಭಯ ಭೀತರಾದರು. ಸಮಯ ಪ್ರಜ್ಞೆಯಿಂದ ಬಸ್ ಚಾಲಕ ಬಸ್ ನ್ನು ಹಿಂಬದಿಗೆ ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದರು.
ಈ ಘಟನೆಯ ವೀಡಿಯೋ ಬಸ್ ನಲ್ಲಿದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.