Friday, April 4, 2025
Google search engine

Homeರಾಜ್ಯಸುದ್ದಿಜಾಲಜೂ.23 ರಂದು ಶ್ರೀ  ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಗಣರಾಧನೆ ಮಹೋತ್ಸವ

ಜೂ.23 ರಂದು ಶ್ರೀ  ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಗಣರಾಧನೆ ಮಹೋತ್ಸವ

ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ : ಐತಿಹಾಸಿಕ ಹಿನ್ನೆಲೆಯುಳ್ಳ ಬೆಟ್ಟದಪುರದ ಶ್ರೀ  ವಿರಕ್ತ ಮಠ ಮತ್ತು ಕನ್ನಡ ಮಠದಲ್ಲಿ ಭಾನುವಾರ (ಜೂನ್ 23 ರಂದು ) ಗಣರಾಧನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಸ್ವಾಮೀಜಿ ಚನ್ನಬಸವ ದೇಶಿ ಕೇಂದ್ರ ಸ್ವಾಮೀಜಿ ತಿಳಿಸಿದರು.

 ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿಯ 96ನೇ ಗಣರಾಧನೆ ಹಾಗೂ ಚೆನ್ನವೀರ ದೇಶಿ ಕೇಂದ್ರ ಸ್ವಾಮೀಜಿಯ 43ನೇ ಗಣರಾಧನೆ ಮಹೋತ್ಸವವನ್ನು ಮಠದಲ್ಲಿ ಹಮ್ಮಿ ಕೊಳ್ಳಲಾಗಿದ್ದು, ಭಾನುವಾರ ಮುಂಜಾನೆಯಿಂದಲೇ ಧ್ವಜಾರೋಹಣ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

 ಧಾರ್ಮಿಕ ಸಭಾ ಕಾರ್ಯಕ್ರಮವು ಯಡಿಯೂರು ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದ್ದು, ಮಲ್ಲನ ಮೂಲೆ ಮಠದ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.

 ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ತಾಲೂಕಿನ ಆಲನಹಳ್ಳಿ ಮಠದ ಪಟ್ಟದ ಶಿವಕುಮಾರ ಸ್ವಾಮೀಜಿ, ಹುಲಿಯೂರು ದುರ್ಗಾ ಮಠದ ಶ್ರೀ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಬೆಳಗಾವಿಯ ಸಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ನೆಲಮಂಗಲದ ಪಾವಡ ಶ್ರೀ ಬಸವಣ್ಣ ದೇವರ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಮಠಾಧೀಶರು ಆಗಮಿಸಲಿದ್ದಾರೆ ಎಂದರು.

 ಕನ್ನಡ ಮಠದ ಪರಂಪರೆ, ಶರಣರ ತತ್ವಗಳು ಸೇರಿದಂತೆ ಧಾರ್ಮಿಕ ವಿಚಾರಗಳನ್ನು ಒಳಗೊಂಡ ಶಿವಾನುಭವ ಗೋಷ್ಠಿ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರಿಗೆ ಸನ್ಮಾನ ಹಾಗೂ ಎಸ್ ಸಿ ವಿ ಡಿ ಎಸ್ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿಸಿ ಕೊಡಬೇಕೆಂದು ಕನ್ನಡ ಮಠದ ಚನ್ನಬಸವ ದೇಶ ಕೇಂದ್ರ ಸ್ವಾಮೀಜಿಯವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular