Sunday, April 20, 2025
Google search engine

Homeರಾಜ್ಯಸುದ್ದಿಜಾಲಗಾನ ಚಂದನ ಕಲಾ ಬಳಗದಿಂದ ಗಾನರಸಾಯನ ಕಾರ್ಯಕ್ರಮ

ಗಾನ ಚಂದನ ಕಲಾ ಬಳಗದಿಂದ ಗಾನರಸಾಯನ ಕಾರ್ಯಕ್ರಮ

ಮೈಸೂರು: ನಗರದ ಶಾರದಾದೇವಿನಗರದಲ್ಲಿರುವ ಗಾನ ಚಂದನ ಕಲಾ ಬಳಗದ ವತಿಯಿಂದ ಪದ್ಮವಿಭೂಷಣ, ಪದ್ಮಶ್ರೀ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾನರಸಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ನಾದಬ್ರಹ್ಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನ ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಎಸ್‌ಪಿಬಿ ಸ್ಮರಣೆಯ ಮಾಡುವ ಜೊತೆಗೆ ಅವರು ಹಾಡಿರುವ ವಿವಿಧ ಭಾಷೆಯ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

ಸಂಸ್ಥೆ ಅಧ್ಯಕ್ಷ ಸುಧೀಂದ್ರ ಅವರು ಜಯ ಗಣೇಶ ಜಯ ಗಣೇಶ ರಕ್ಷಿಸು ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.

ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಅಚ್ಚುತ, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಜೆಪಿ ಮುಖಂಡ ಜೋಗಿ ಮಂಜು, ಜೆಡಿಎಸ್ ನಾಯಕ ಶೇಖರ್ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular