ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಹಾಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ಅನುಕರಣೀಯ ಮಾಡುವುದು ಬಹಳ ಮುಖ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.
ಕೆ.ಆರ್.ನಗರ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಅಂಗವಾಗಿ ಮಹನೀಯರ ಬಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಗಾಂಧೀಜಿಯವರ ಸಂದೇಶಗಳು ಸರ್ವಕಾಲಿಕ. ಇಡೀ ಜಗತ್ತಿಗೆ ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದ ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯ, ಸಂದೇಶಗಳನ್ನು ಎಲ್ಲರೂ ಪಾಲಿಸಿ ಸಂಸ್ಕೃತ,ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಮಾತನಾಡಿ, ಅಹಿಂಸಾ ಚಳುವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ್ದಾರೆ. ಸತ್ಯಮಾರ್ಗದ ರಕ್ತ ರಹಿತ ಚಳುವಳಿಯ ಶಕ್ತಿ ಏನೆಂಬುದನ್ನು ಅವರು ಪರಿಚಯಿಸಿದ್ದಾರೆ ಎಂದರು.
ಮಹಾತ್ಮಾ ಗಾಂಧಿಜೀ ಅತ್ಯಂತ ಸರಳ ಜೀವನ ನಡೆಸಿ ಸಮಾಜದ ಸುಧಾರಣೆಗೆ ಬದುಕನ್ನೆ ಮುಡಿಪಾಗಿಟ್ಟಿದ್ದರು ಅವರ ಆದರ್ಶ ರೀತಿ ನೀತಿಗಳನ್ನು ನಾವು ಆಚರಣೆ ಮಾಡುವ ಮೂಲಕ ಆಚರಿಸದೆ ಪಾಲಿಸುವ ಮೂಲಕ ಆಚರಿಸಬೇಕು ಎಂದು ಸಂದೇಶ ನೀಡಿದರು.
ರಾಷ್ಟ್ರಪಿತನ ಜನ್ಮದಿನದ ಅಂಗವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಗಾಂಧೀಜಿ ಅವರು ಅಹಿಂಸಾ (ಅಹಿಂಸಾ) ವಾದಿಗಳಾಗಿದ್ದವರು , ಆದ್ದರಿಂದ ಈ ದಿನವನ್ನು ವಿಶ್ವಸಂಸ್ಥೆಯು ಅಹಿಂಸಾ ಅಂತರರಾಷ್ಟ್ರೀಯ ದಿನವಾಗಿ ಆಚರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ವಿ.ರಮೇಶ್, ಹೆಚ್.ಜೆ.ಮಹೇಶ್, ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ತಾ.ಆರೋಗ್ಯ ಸುರಕ್ಷಣಾಧಿಕಾರಿ ಪಾರ್ವತಿ, ಪಾರ್ಮಸಿ ಅಧಿಕಾರಿ ಆನಂದ್, ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿಗಳಾದ ರೇವಣ್ಣ, ಅಂಬಿಕಾದಾಸ್, ಸಿಬ್ಬಂದಿಗಳಾದ ಚೇತನ್ ಬೇಬಿ, ಪೂರ್ಣಿಮಾ, ಸವಿತ, ಚಾಲಕ ನಂದೀಶ್, ರಾಜೇಶ್, ಜವರಯ್ಯ ಇದ್ದರು.