ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಗಾಂಧಿಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿಶಿವಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟೇಗೌಡ ಅವರುಗಳು ನಾಮಪತ್ರ ಸಲ್ಲಿಸಿದ್ದರು. ಇವರುಗಳನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಗಾಂಧಿಶಿವಣ್ಣ ಅಧ್ಯಕ್ಷರಾಗಿ ಹಾಗೂ ಪುಟ್ಟೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ
ಬಿ.ರಾಜು ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರುಗಳಾದ ಪುಟ್ಟೇಗೌಡ, ಜಿ.ಎನ್.ಸುಬ್ಬೆಗೌಡ, ನಿಂಗರಾಜು, ಜಿ.ಎಸ್.ಶಿವಣ್ಣ, ಜಿ.ಸಿ.ಮಹದೇವ, ಕೆ.ಶಿವಣ್ಣ, ಸಣ್ಣಸ್ವಾಮಿ, ಭಾಗ್ಯಮ್ಮ, ಜವರಮ್ಮ, ಜಯರಾಮಜೋಗಿ
ಸಿಇಓ ಜಿ.ಕೆ.ಮಹದೇವ, ಹಾಲು ಪರೀಕ್ಷಕ ವಿಶ್ವನಾಥ್, ಸಹಾಯಕ ಗಣೇಶ್, ಗುಮಾಸ್ತ ಜಿ.ಎಂ.ಅಮಿತ್ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷ ಗಾಂಧಿಶಿವಣ್ಣ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಶಾಸಕ ಡಿ.ರವಿಶಂಕರ್, ಸಂಘದ ಎಲ್ಲಾ ನಿರ್ದೇಶಕರುಗಳು, ಮುಖಂಡರುಗಳು ಹಾಗೂ ಗ್ರಾಮಸ್ಥರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ, ಮಾರ್ಗದರ್ಶನದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದರು.
ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ನೂತನ ಅಧ್ಯಕ್ಷರಾದ ಗಾಂಧಿಶಿವಣ್ಣ ಹಾಗೂ ಉಪಾಧ್ಯಕ್ಷ ಪುಟ್ಟೇಗೌಡ ಅವರುಗಳನ್ನು ಸಂಘದ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು, ಜನಪ್ರತಿನಿಧಿಗಳು, ಮುಖಂಡರುಗಳು ಸೇರಿದಂತೆ ಹಲವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಹದೇವಿಬಲರಾಮ್, ಮಾಜಿ ಅಧ್ಯಕ್ಷರಾದ ಚಿಕ್ಕೇಗೌಡ, ಯೋಗೇಶ್, ಉಪಾಧ್ಯಕ್ಷ ಜಿ.ಆರ್.ಲೋಕೇಶ್, ತಾ.ಪಂ. ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಕೆಂಪರಾಜು, ಅಂಗಡಿಶಿವಣ್ಣ, ಹೇಮಂತ್ ಕುಮಾರ್, ಮರೀಗೌಡ, ಮಂಜುರಾಮಣ್ಣ, ಅರುಣ್ ಕುಮಾರ್, ಅಭಿಷೇಕ್ ಸೇರಿದಂತೆ ಹಲವರು ಇದ್ದರು.