ಮಂಡ್ಯ: ಶ್ರೀರಂಗಪಟ್ಟಣ ಟೌನ್’ನ ಗಂಜಾಮ್ ನಲ್ಲಿಭಾನುವಾರ(ನ.5) ರಾತ್ರಿ ಗಂಜಾಂನಲ್ಲಿ ಅದ್ದೂರಿಯಾಗಿ ಗಣೇಶನ ವಿಸರ್ಜನೋತ್ಸವ ನಡೆಯಿತು.

ಶ್ರೀರಾಮ ಭಕ್ತಮಂಡಳಿಯ ವತಿಯಿಂದ ರಾಮಮಂದಿರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ನಿನ್ನೆ ರಾತ್ರಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ನಿಮಿಷಾಂಭ ದೇಗುಲ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ವಿಸರ್ಜನೆಗೂ ಮುನ್ನಾ ಗ್ರಾಮದ ಮುಖ್ಯ ಬೀದಿಯಲ್ಲಿ ಗಣೇಶನ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳು ರಂಗು ತುಂಬಿದವು. ಅಪ್ಪುವಿನ ಭಾವಚಿತ್ರ ನೋಡುಗರ ಗಮನ ಸೆಳೆಯಿತು.
