ಗಂಗಾವತಿ: ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಪ್ರಸಾದ ಇವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಲಿಂಗರಾಜು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಜಿಲ್ಲಾ ಮಟ್ಟದ ರಾಷ್ಟ್ರೀಯ ಕಾರ್ಯಕ್ರಮ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಲಿಂಗರಾಜು ಅವರಿಗೆ ಸಭೆಯ ಎಲ್ಲಾ ಅಧಿಕಾರಿಗಳ ಎದುರಿಗೆ ವಾಗ್ವಾದಕ್ಕೆ ಇಳಿದಿದ್ದು, ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಸಭೆಯಲ್ಲಿ ಕಾರ್ಯಕ್ರಮಗಳ ಅಂಕಿ ಅಂಶಗಳನ್ನು ತಾಳೆ ಹೊಂದಿಸಿ ಜಿಲ್ಲಾ ಮಟ್ಟಕ್ಕೆ ಸರಿಯಾಗಿ ನೀಡದೇ ಪ್ರತಿಯೊಂದು ಮಾಹಿತಿಗಾಗಿ ತಾಲೂಕ ಆರೋಗ್ಯಾಧಿಕಾರಿಗಳನ್ನೇ ಕೇಳಬೇಕು ಎಂದು ಬೇಜಾಬ್ದಾರಿತನ ದಿಂದ ನಡೆದುಕೊಂಡು ಹಿರಿಯ ಅಧಿಕಾರಿಗಳಿಗೆ ಅಗೌರವನ್ನುಂಟು ಮಾಡಿದ ಪ್ರಕರಣದಲ್ಲಿ ವಿಜಯಪ್ರಸಾದ ಕರ್ತವ್ಯದಲ್ಲಿ ದುರ್ನಡತೆ ಮತ್ತು ಕರ್ತವ್ಯಲೋಪ ಎಸಗಿರುವುದರಿಂದ ಮತ್ತು ಮೇಲಾಧಿಕಾರಿಗಳಿಗೆ ಆಗೌರವವನ್ನು ತೋರಿರುವುದರಿಂದ ಸದರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.