Friday, April 4, 2025
Google search engine

Homeರಾಜ್ಯಜ.18 ರಂದು ಗಂಗೂಬಾಯಿ ಹಾನಗಲ್ ವಿವಿ ವಾರ್ಷಿಕ ಘಟಿಕೋತ್ಸವ: 9 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ

ಜ.18 ರಂದು ಗಂಗೂಬಾಯಿ ಹಾನಗಲ್ ವಿವಿ ವಾರ್ಷಿಕ ಘಟಿಕೋತ್ಸವ: 9 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಜನವರಿ 18 ರಂದು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಲಿದ್ದು ಈ ವೇಳೆ 9 ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ವಿವಿಯ ಕುಲಪತಿ ಪ್ರೊ ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದರು.

ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ವಾರ್ಷಿಕ ಘಟಿಕೋತ್ಸವ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ ನಾಗೇಶ್ ವಿ ಬೆಟ್ಟಕೋಟೆ, ಜನವರಿ 18ರಂದು ವಾರ್ಷಿಕ ಘಟಿಕೋತ್ಸವ ನಡೆಯಲಿದೆ. ವಿಶ್ವ ವಿದ್ಯಾಲಯ ಶೈಕ್ಷಣಿಕ ಚಟುವಟಿಕೆ ಪ್ರಾರಂಭ ಮಾಡಿ 15ವರ್ಷ ಆಗಿದೆ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ 70 ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲಾ ಸಂಸ್ಥೆಗಳು ಘಟಿಕೋತ್ಸವದಲ್ಲಿ ಭಾಗಿಯಾಗಲಿವೆ ಎಂದರು.

7,8,9ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದಕ ವಿಜೇತರು, ಗೌರವ ಡಾಕ್ಟರೇಟ್, ಹಾಗೂ ಡಿ ಲಿಟ್ ಪದವಿ ಪ್ರದಾನ ಮಾಡಲಾಗುತ್ತಿದೆ. 27 ವಿದ್ಯಾರ್ಥಿಗಳಿಗೆ 69 ಚಿನ್ನದ ಪದಕ ನೀಡಲಾಗುತ್ತಿದೆ.

2021 22ನೇ ಸಾಲಿನಲ್ಲಿ ಭರತನಾಟ್ಯ ಕಲಾವಿದ ಸತ್ಯನಾರಾಯಣ ರಾಜು, ವಿದ್ವಾನ್ ಸಿ.ಚೆಲುವರಾಜು ,ರಂಗಭೂಮಿ ಹಾಗೂ ಚಲನಚಿತ್ರ ನಟಿ ಗಿರಿಜಾ ಲೋಕೇಶ್, 2022- 23ನೇ ಸಾಲಿನಲ್ಲಿ ಭರತನಾಟ್ಯ ಕಲಾವಿದೆ ಸಂಧ್ಯಾಪುರೇಚ, ಗಮಕ ವಿದ್ವಾನ್ ಎಂ ಆರ್ ಸತ್ಯನಾರಾಯಣ, ಪ್ರದರ್ಶಕ ಕಲೆಗಳ ವಿಭಾಗದಿಂದ ಚಲನಚಿತ್ರ ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ, 2023-24ನೇ ಸಾಲಿನಲ್ಲಿ ವಿದುಷಿ ವೀಣಾ ಮೂರ್ತಿ ವಿಜಯ್, ವಿದುಷಿ ಪುಷ್ಪ ಶ್ರೀನಿವಾಸನ್ ಹಾಗೂ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular