ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ಗೌಡಳ್ಳಿ ರಾಜೇಶ್ ರವರು ನೇಮಕಗೊಂಡಿದ್ದಾರೆ. ಯಳಂದೂರು ತಾಲ್ಲೂಕಿನ ಗೌಡಳ್ಳಿ ಗ್ರಾಮದ ರಾಜೇಶ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿ ತಮ್ಮ ಸೇವೆ ಸಲ್ಲಿಸಿದರ ಅನ್ವಯ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ರವರ ಶಿಫಾರಸ್ಸಿನ ಮೇರೆಗೆ ಇವರನ್ನ ಗುರುತಿಸಿ ಜಿಲ್ಲಾ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕಮಾಡಿ ಆದೇಶವನ್ನ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಮರಿಸ್ವಾಮಿ ರವರು ಆದೇಶವನ್ನ ಹೊರಡಿಸಿ ಪಕ್ಷದ ಜವಬ್ದಾರಿಯುತ ಕೆಲಸಗಳನ್ನು ನಿರ್ವಹಿಸುತ್ತಾ ಪಕ್ಷದ ಮಾನ್ಯ ಶಾಸಕರು /ಮಾಜಿ ಶಾಸಕರು,ಮಾಜಿ ಸಂಸದರು,ಮಾಜಿ ಸಚಿವರು,ಬ್ಲಾಕ್ ಕಾಂಗ್ರೆಸ್ ಸಮಿತಿ,ಮುಂಚೂಣಿ ನಾಯಕರ ಸಹಕಾರದೊಂದಿಗೆ ಪಕ್ಷವು ವಹಿಸಿರುವ ಜವಾಬ್ದಾರಿಯನ್ನ ಶ್ರದ್ದೆಯಿಂದ ನಿರ್ವಹಿಸುವಂತೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಮಾಧ್ಯಮ ಕಾರ್ಯದರ್ಶಿಗೆ ಶುಭಾಶಯವನ್ನ ಕೋರಿದ್ದಾರೆ.
