Wednesday, August 13, 2025
Google search engine

Homeರಾಜ್ಯಸುದ್ದಿಜಾಲಗೌರಿ-ಗಣೇಶ ಹಬ್ಬ: ಸರ್ಕಾರದ ಮಾರ್ಗಸೂಚಿ ಮೀರಿ, ಕಾನೂನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ: ವೃತ್ತ ನಿರೀಕ್ಷಕ...

ಗೌರಿ-ಗಣೇಶ ಹಬ್ಬ: ಸರ್ಕಾರದ ಮಾರ್ಗಸೂಚಿ ಮೀರಿ, ಕಾನೂನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ: ವೃತ್ತ ನಿರೀಕ್ಷಕ ಶಶಿಕುಮಾರ್ ಎಚ್ಚರಿಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಗೌರಿ-ಗಣೇಶ ಹಬ್ಬವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗ ಸೂಚಿಯ ನಿಯಮಗಳನ್ನು ಪಾಲಿಸಿ ಆಚರಣೆ ಮಾಡದೇ ಕಾನೂನು ಉಲ್ಲಂಘಿಸಿದರೇ ಅಂತಹವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಾಲಿಗ್ರಾಮ ಠಾಣೆಯ ವೃತ್ತ ನಿರೀಕ್ಷಕ ಶಶಿಕುಮಾರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಉಪ ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಕಡ್ಡಾಯವಾಗಿ ಡಿ.ಜೆ.ಬಳಕೆಯನ್ನು‌ ನಿಷೇಧಿಸಲಾಗಿದ್ದು ಮೈಕ್ ಬಳಕೆ ಮಾಡಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕೊಳ್ಳಬೇಕು ಸ್ಥಳಿಯ ಗ್ರಾ.ಪಂ.ಗಳಿಂದ ಸ್ಥಳದ ಅನುಮತಿ ಮತ್ತು ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡ ಮುನ್ನಚರಿಕೆಯ ಕುರಿತು ಅನುಮತಿ ಪಡೆದು ಕೊಳ್ಳಬೇಕೆಂದರು.

ಗೌರಿ ಗಣೇಶ ಪ್ರತಿಷ್ಠಾಪನೆಯ ಬಗ್ಗೆ ಆಯಾ ಗ್ರಾಮಗಳ ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕು. ಜತಗೆ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಅಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಧ್ವನಿ ವರ್ಧಕಗಳ ಶಬ್ಧವನ್ನು ಕಡಿಮೆಯಾಗಿ ಬಳಸಬೇಕು ಎಂದು ಸೂಚಿಸಿದ ಶಶಿಕುಮಾರ್ ಗೌರಿ ಗಣೇಶ ಮೂರ್ತಿಗಳ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಕೆಟ್ಟ ಸಂದೇಶಗಳನ್ನು ಹಾಕುವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಯಾವುದೇ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಅಲ್ಲದೇ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಆಯೋಜಕರು ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಜತಗೆ ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಜಗದೀಶ್, ಚಿಬುಕಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ವಿ.ಮಂಜುನಾಥ್, ಸದಸ್ಯರಾದ ಶ್ರೀರಾಮಪುರ ಅಭಿ, ಗೋವಿಂದೇಗೌಡ, ಮಹೇಂದ್ರ, ಮಾಜಿ ಸದಸ್ಯರಾದ ಸಿ.ಜಿ.ಮಧು, ಡಿ.ಎಸ್.ಕುಮಾರ್, ಮುಖಂಡರಾದ ವಡ್ಡರಕೊಪ್ಪಲು ಗಾಂಧಿ, ಸಿಕೆ ಮನುರಾಜಣ್ಣ, ರಮೇಶ್, ಪ್ರಶನ್ನ, ಹೊಟೇಲ್ ಲೋಕೇಶ್, ಜಯಣ್ಣ, ಮಂಜ, ರಾಜಪ್ಪ, ಮಂಚಿಮಹದೇವ್, ಚುಂಚನಕಟ್ಟೆ ಉಪಪೊಲೀಸ್ ಠಾಣೆಯ ಮುಖ್ಯಪೇದೆ ದೊರೆಸ್ವಾಮಿ, ಸಿಬ್ಬಂದಿಗಳಾದ ಮನು, ಕಾಳಮ್ಮನಕೊಪ್ಪಲು ರಘು, ಗೃಹರಕ್ಷಕದಳದ ಎಚ್.ಜಿ.ಸತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular