ಗುಂಡ್ಲುಪೇಟೆ: ಪೋಲೀಸ್ ಠಾಣೆಯಲ್ಲಿ ಡಿವೈಎಸ್ ಪಿ ಲಕ್ಷಯ್ಯ ಅವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೂರ್ವ ಭಾವಿ ಸಭೆ ನಡೆಸಲಾಯಿತು.
ಗೌರಿಗಣೇಶ ಹಬ್ಬವನ್ನ ಶಾಂತಿಯುತವಾಗಿ ಆಚರಣೆ ಮಾಡಿ ಯಾವುದೇ ಕೋಮು ಗಲಭೆಗೆ ಅವಕಾಶ ಮಾಡಿಕೊಡದೇ ಆಚರಣೆ ಮಾಡಿ ಎಂದು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮದ ಮುಖಂಡರಲ್ಲಿ ಡಿವೈಎಸ್ ಪಿ ಲಕ್ಷಯ್ಯ ಮನವಿ ಮಾಡಿದರು.

ಎಲ್ಲಾ ಸಮುದಾಯದ ಜನರನ್ನ ಗೌರಿ ಗಣೇಶಕ್ಕೆ ಆಹ್ವಾನಿಸಿ ಆಚರಣೆ ಮಾಡಿ ಹಾಗೂ ಸಂಬಂದಪಟ್ಟ ಇಲಾಖೆಯ ವತಿಯಿಂದ ಕೆಇಬಿ.ಪುರಸಭೆ, ಗ್ರಾಮ ಪಂಚಾಯತಿ, ಪೋಲೀಸ್ ಇಲಾಖೆಯ ವತಿಯಿಂದ ಅನುಮತಿ ಪಡೆದು ಸರ್ಕಾರದ ನಿಯಮಾವಳಿ ಗಳನ್ನ ಪಾಲಿಸಿ ಪ್ರತಿಯೊಂದು ಗ್ರಾಮದ ಜನತೆ ಸಹಕರಿಸಬೇಕು. ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಜೊತೆ ಅನುಚಿತ ವರ್ತನೆ ಮಾಡಿದರೇ ಅಂತವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಲಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ, ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ ಹಾಗೂ ಪುರಸಭೆಯ ಸದಸ್ಯರಾದ ರಾಜ್ ಗೋಪಾಲ್, ನಾಗೇಶ್ ತಾಲೂಕಿನ ವಿವಿಧ ಗ್ರಾಮದ ಮುಖಂಡರು ಹಾಜರಿದ್ದರು.
