Saturday, April 19, 2025
Google search engine

Homeರಾಜ್ಯಸುದ್ದಿಜಾಲಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜನರಲ್ ಮುಕುಂದ್ ನಾರವಣಿ ಭೇಟಿ

ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜನರಲ್ ಮುಕುಂದ್ ನಾರವಣಿ ಭೇಟಿ

ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ನಿವೃತ್ತ ಜನರಲ್ ಮುಕುಂದ್ ನಾರವಣಿ ಪಿವಿಎಸ್‍ಎಂ, ಎವಿಎಸ್ ಎಂ,ಎಸ್‍ಎಂ, ವಿಎಸ್‍ಎಂ ಭೇಟಿ ನೀಡಿದರು.

ಜನರಲ್ ತಿಮ್ಮಯ್ಯ ಅವರ ಸೇನಾ ಜೀವನದ ಕುರಿತಂತೆ ಸಮಗ್ರವಾಗಿ ಸ್ಮಾರಕ ಭವನದಲ್ಲಿ ಮಾಹಿತಿ ನೀಡಿರುವುದನ್ನು ಮುಕುಂದ್ ನಾರವಣಿ ಶ್ಲಾಘಿಸಿದರು. ಜನರಲ್ ತಿಮ್ಮಯ್ಯ ಜೀವನ ಯುವ ಪೀಳಿಗೆಗೆ ಸದಾ ಆದರ್ಶಪ್ರಾಯ. ಇಂತಹ ಸ್ಮಾರಕ ಭವನ ವೀಕ್ಷಣೆಯಿಂದ ಜನರಿಗೆ ಭಾರತೀಯ ಸೇನೆಯ ಹೆಮ್ಮೆಯ ಧೀರಯೋಧರ ಸಾಹಸಗಾಥೆಗಳು ತಿಳಿದಂತಾಗುತ್ತದೆ ಎಂದರಲ್ಲದೇ ಸ್ಮಾರಕ ಭವನವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿರುವುದನ್ನೂ ಶ್ಲಾಘಿಸಿದರು.

ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಈ ಸಂದರ್ಭ ಸ್ಮಾರಕ ಭವನದ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular