ಮೈಸೂರು: ಮನುಷ್ಯನಿಗೆಆರೋಗ್ಯ ಬಹಳ ಮುಖ್ಯವಾಗಿರುವುದರಿಂದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಆರೋಗ್ಯತಪಾಸಣೆ ಮಾಡಿಸಿಕೊಳ್ಳಬೇಕೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಕೆ. ಮರಿಗೌಡ ತಿಳಿಸಿದರು.
ರಾಮಕೃಷ್ಣ ನಗರದ ಜಿ ಬ್ಲಾಕ್‌ನಲ್ಲಿರುವ ಶ್ರೀ ಗೌರಿಸುತ ಗೆಳೆಯರ ಬಳಗದವತಿಯಿಂದಗೌರಿಗಣೇಶ ಹಬ್ಬದ ಅಂಗವಾಗಿ ನಡೆದಉಚಿತಆರೋಗ್ಯತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದಅವರು ಮನುಷ್ಯನ ಬಳಿ ಎಷ್ಟೇ ಹಣ ಸಂಪತ್ತುಐಶ್ವರ್ಯವಿದ್ದರೂ ಸಹ ಆರೋಗ್ಯಚೆನ್ನಾಗಿಲ್ಲದಿದ್ದರೆ ಬದುಕೇಶೂನ್ಯವೆನಿಸುತ್ತದೆ. ಕೊರೋನಾ ಸಂದರ್ಭದಲ್ಲಿಎಂತೆಂತಹ ಕೋಟ್ಯಾಧಿಪತಿಗಳೂ ಸಹ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬದನ್ನು ನಾವು ಮರೆಯುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ೨೦೨೧೩ ರಿಂದ ೧೮ ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿಜಯದೇವಆಸ್ಪತ್ರೆ,ಜಿಲ್ಲಾಆಸ್ಪತ್ರೆ, ಟ್ರಾಮ ಸೆಂಟರ್,ಆಯುರ್ವೆದಆಸ್ಪತ್ರೆ,ತುಳಸಿದಾಸಪ್ಪ ಆಸ್ಪತ್ರೆ, ನೆಪ್ರ್ರೋಲಜಿ ವಿಭಾಗಗಳನ್ನು ನಿರ್ಮಾಣ ಮಾಡಿ ಈ ಭಾಗದ೫ ಜಿಲ್ಲೆಗಳ ಜನರಿಗೆ ಅನುಕುಲ ಮಾಡಿಕೊಟ್ಟಿದ್ದಾರೆ.
ಮೈಸೂರುತಾಲ್ಲೂಕುಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಬಿ. ರವಿ ನೇತೃತ್ವದಲ್ಲಿ ಈ ಆರೋಗ್ಯತಪಾಸಣಾ ಶಿಬಿರವನ್ನು ಏರ್ಪಡಿಸಿದ್ದಾರೆ.ಅನ್ನಪೂರ್ಣಕಣ್ಣಿನಆಸ್ಪತ್ರೆ, ಮೈಸೂರು ವೈದ್ಯಕೀಯಕಾಲೇಜು ಮತ್ತು ಸಂಶೋಧಾನಾ ಸಂಸ್ಥೆಯಿಂದರಕ್ತದಾನ ಶಿಬಿರ, ಜಿಸಿಸ್ ಸ್ಪೋಟ್ಸ್ ಮಡಿಸಿನ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿಆಸ್ಪತ್ರೆಯಿಂದಆರೋಗ್ಯತಪಾಸಣೆ ಮಾಡಿಸಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿಡಾರೋಜಾ,ಜಯಶ್ರೀ ಮರೀಗೌಡ,ವ್ಯವಸ್ಥಾಪಕರಾದ ಬಿ. ರವಿ, ಸಿ.ಎಚ್. ಕೃಷ್ಣರವರು, ನೇತ್ರ ಪರೀಕ್ಷಕರಾದಉದಯ್,ಕಾವ್ಯ, ರಾಜೆಅರಸ್, ರವಿ ಎಚ್., ವರುಣ ಮಧು, ಕಿರಣ್ ನವೀನ್,ಕುಮಾರ್‌ಹಾಜರಿದ್ದರು.