Friday, May 16, 2025
Google search engine

Homeರಾಜ್ಯಸುದ್ದಿಜಾಲಕಠಿಣ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆಯಿರಿ: ವಿದ್ಯಾರ್ಥಿಗಳಿಗೆ ಶಾಸಕ ರವಿಶಂಕರ್ ಸಲಹೆ

ಕಠಿಣ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆಯಿರಿ: ವಿದ್ಯಾರ್ಥಿಗಳಿಗೆ ಶಾಸಕ ರವಿಶಂಕರ್ ಸಲಹೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ವಿದ್ಯಾರ್ಥಿಗಳು ಬಯಸಿದನ್ನು ಶಿಕ್ಷಣದ ಮೂಲಕ ಸಾಧಿಸಬೇಕಾದರೆ ಕಠಿಣ ಪರಿಶ್ರಮ ದೊಂದಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕಾಲೇಜಿನ ದಿನಗಳು ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು ಈ ಅವಧಿಯಲ್ಲಿ ನೀವುಗಳು ತೆಗೆದು ಕೊಳ್ಳುವ ನಿರ್ಧಾರ ಮತ್ತು ಕೈಗೊಳ್ಳುವ ನಿಷ್ಕಲ್ಮಷ ಚಟುವಟಿಕೆ ಗಳು ಜೀವನವನ್ನು ನಿರ್ಧರಿಸಲಿದ್ದು ಎಲ್ಲರೂ ಸ್ವತಂತ್ರವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವ ಜನತೆ ಕಟ್ಟಿ ಬದ್ದರಾಗಿ ಕೆಲಸ ಮಾಡಬೇಕಾಗಿದ್ದು ನೀವೆಲ್ಲರೂ ಗುರುಗಳು, ಪೋಷಕ ರು ಮತ್ತು ಹಿರಿಯ ಮಾರ್ಗದರ್ಶನ ಪಡೆದು ಯಶಸ್ಸು ಗಳಿಸಿ ಎಂದು ಸಲಹೆ ನೀಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ವತಿಯಿಂದ ತರಗತಿಗಳನ್ನು ಪ್ರಾರಂಭಿಸುತ್ತಿದ್ದು ಆಸಕ್ತರು ಇದರ ಅನುಕೂಲ ಪಡೆಯಬೇಕೆಂದು ನುಡಿದ ಶಾಸಕರು ಮುಂದಿನ ದಿನಗಳಲ್ಲಿ ಕಾಲೇಜನ್ನು ಉನ್ನತ ಸ್ಥಾನಕೇರಿಸಲು ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಎಂದು ಪ್ರಕಟಿಸಿದರು.

ಕಾಲೇಜಿನ‌ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ಮನವಿಯನ್ನು ಪುರಾಸ್ಕರಿಸಿ ಇಲ್ಲಿ ರಾಷ್ಟೀಯ ಮತ್ತು ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ನಡೆಸಲು ಕ್ರೀಡಾಂಗಣವನ್ನು ಸಮತ್ತಟ್ಟು ಮಾಡಿಸುವುದಾಗಿ ಭರವಸೆ ನೀಡಿದರಲ್ಲದೆ ಕಾಲೇಜು ಆವರಣದಲ್ಲಿ ಶಿಥಲಗೊಂಡಿರುವ ಕಟ್ಟಡಗಳನ್ನು ನೆಲೆ ಸಮಗೊಳ್ಳಿಸಿ 16 ಕೋಟಿ ರೂಗಳ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡುವುದಾಗಿ ಭರವಸೆ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತಲ್ಲದೆ ಆನಂತರ ಅವರು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆ ಗೊಂಡವು.

ಟಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರೇಷ್ಮಚಂಗಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಹೆಚ್.ಪಿ.ಪ್ರಶಾಂತ್, ಪ್ರಾಂಶುಪಾಲ ಡಾ.ಬಿ.ಎಸ್.ಜಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಆರ್.ದೀಕ್ಷೀತ್ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹೆಚ್.ಎಸ್.ವೇಣುಗೋಪಾಲ್, ನಟರಾಜು, ಬೆಟ್ಟನಾಯಕ, ಸನ್ನಾಉಲ್ಲಾಖಾನ್, ತಿಮ್ಮಯ್ಯ, ಕೆ.ಎಲ್.ರಾಜೇಶ್, ಶಂಕರ್, ಕಾಲೇಜು ಉಪನ್ಯಾಸಕರುಗಳಾದ ಕೆ.ಎನ್.ಮೋಹನ್, ಕಿರಣ್ ಕುಮಾರ್, ರಾಘವೇಂದ್ರ, ನಿಸಾರ್ ಖಾನ್, ಡಾ.ಎ.ಸುಮ, ಡಾ.ತಿಪ್ಪೆಸ್ವಾಮಿ, ಡಾ.ಎಲ್.ಮಹೇಶ್, ಅತಿಥಿ ಉಪನ್ಯಾಸಕರುಗಳಾದ ಮೂಲೇಪೆಟ್ಲು ಪ್ರದೀಪ್ ಕುಮಾರ್, ವಂದನ, ಶ್ವೇತಾ, ಸಾಗರ್, ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular