Monday, June 8, 2026
Google search engine

Homeದೇಶದಳಪತಿ ವಿಜಯ್ ಕಡೆಯಿಂದ ರಾಹುಲ್ ಗಾಂಧಿಗೆ ಗಿಫ್ಟ್ : ಕಾಂಗ್ರೆಸ್‌ಗೆ ತಮಿಳುನಾಡಿನ ರಾಜ್ಯಸಭಾ ಸೀಟು; ಸ್ಟಾಲಿನ್...

ದಳಪತಿ ವಿಜಯ್ ಕಡೆಯಿಂದ ರಾಹುಲ್ ಗಾಂಧಿಗೆ ಗಿಫ್ಟ್ : ಕಾಂಗ್ರೆಸ್‌ಗೆ ತಮಿಳುನಾಡಿನ ರಾಜ್ಯಸಭಾ ಸೀಟು; ಸ್ಟಾಲಿನ್ ನೇತೃತ್ವದ ಡಿಎಂಕೆ ವ್ಯಂಗ್ಯ

ಚೆನ್ನೈ: ಟಿವಿಕೆ (TVK) ತಮಿಳುನಾಡಿನಲ್ಲಿ ತನ್ನ ಮೊದಲ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ನಿರ್ಧರಿಸಿದೆ. ತಲಪತಿ ವಿಜಯ್ ಅವರು ಕಾಂಗ್ರೆಸ್‌ಗೆ ಈ ಸೀಟು ನೀಡಿದ ಬೆನ್ನಲ್ಲೇ, ಡಿಎಂಕೆ ‘ಇಂಡಿಯಾ’ (INDIA) ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬರುವುದಾಗಿ ಘೋಷಿಸಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ನಡೆದುಕೊಂಡ ರೀತಿಯಿಂದಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ಡಿಎಂಕೆ ನಾಯಕರು ಹೇಳಿದ್ದಾರೆ.

ಟಿವಿಕೆಯ ಮೊದಲ ರಾಜ್ಯಸಭಾ ಸೀಟಿನ ಬಗ್ಗೆ ಪಕ್ಷದಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಸೀಟನ್ನು ಪಕ್ಷದೊಳಗಿನ ನಾಯಕರಿಗೇ ನೀಡಬೇಕು ಎಂದು ಹಲವು ನಾಯಕರು ವಾದಿಸಿದ್ದರು. ಆದರೆ, ಮುಖ್ಯಮಂತ್ರಿ ವಿಜಯ್ ಅವರ ಆಲೋಚನೆಯೇ ಬೇರೆಯಾಗಿತ್ತು.

ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್‌ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಪ್ರವೀಣ್ ಚಕ್ರವರ್ತಿ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ. ಚಕ್ರವರ್ತಿ ಅವರು ವಿಜಯ್ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದು, ಟಿವಿಕೆ-ಕಾಂಗ್ರೆಸ್ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾಂಗ್ರೆಸ್‌ಗೆ ಸೀಟು ನೀಡುವ ಮೂಲಕ ವಿಜಯ್ ಸಂದೇಶ

ಕೇರಳ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಜಯ್ ಗೈರಾಗಿದ್ದಾಗ, ಉಭಯ ಪಕ್ಷಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಮತ್ತು ಟಿವಿಕೆ ಈಗ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದ್ದರೂ, ರಾಜ್ಯಸಭಾ ಸೀಟನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ವಿಜಯ್ ತಮ್ಮ ಪಕ್ಷದೊಂದಿಗಿನ ಗಟ್ಟಿ ಸಂಬಂಧದ ಸಂದೇಶವನ್ನು ನೀಡಿದ್ದಾರೆ. ಟಿವಿಕೆ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮೂಲಗಳ ಪ್ರಕಾರ, ಉಭಯ ಪಕ್ಷಗಳು ದೀರ್ಘಾವಧಿಯವರೆಗೆ ಒಟ್ಟಾಗಿ ಕೆಲಸ ಮಾಡಲು ಉತ್ಸುಕವಾಗಿವೆ.

ದಳಪತಿ ವಿಜಯ್ ವಿರುದ್ಧ ಡಿಎಂಕೆ ವ್ಯಂಗ್ಯ

ಇದೇ ವೇಳೆ, ಟಿವಿಕೆ ಪಕ್ಷವು ರಾಜ್ಯಸಭಾ ಸೀಟನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಮೂಲಕ ಬಿಜೆಪಿಯೊಂದಿಗೆ ನೇರ ಸಂಘರ್ಷಕ್ಕಿಳಿಯುವುದನ್ನು ತಪ್ಪಿಸಲು ಯತ್ನಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ. ಡಿಎಂಕೆ ವಕ್ತಾರ ಶರವಣನ್ ಅವರು ಫೇಸ್‌ಬುಕ್‌ನಲ್ಲಿ, “ನೀವು ರಾಜ್ಯಸಭೆಗೆ ಹೋದರೆ, ಪ್ರತಿಯೊಂದು ವಿಷಯದ ಮೇಲೂ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಬಿಜೆಪಿಯನ್ನು ನೇರವಾಗಿ ವಿರೋಧಿಸಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಟಿವಿಕೆಯಿಂದ ಯಾವುದೇ ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಿಲ್ಲ” ಎಂದು ಬರೆದುಕೊಂಡಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದಿಂದ ಹೊರಬಂದ DMK

ದೆಹಲಿಯಲ್ಲಿ ಇಂದು ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಗೆ ಮುನ್ನವೇ ಡಿಎಂಕೆ ಮೈತ್ರಿಯಿಂದ ಹೊರನಡೆದಿರುವುದು ಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಟಿವಿಕೆ ಪಕ್ಷದ ಸೇರ್ಪಡೆಯಿಂದಾಗಿ ಡಿಎಂಕೆಯ ಕೊರತೆಯನ್ನು ನೀಗಿಸಬಹುದು ಎಂದು ಕಾಂಗ್ರೆಸ್ ನಂಬಿದೆ. ಆದರೆ, ಟಿವಿಕೆ ಇನ್ನೂ ಅಧಿಕೃತವಾಗಿ ಇಂಡಿಯಾ ಮೈತ್ರಿಕೂಟವನ್ನು ಸೇರಿಲ್ಲ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular