Friday, January 23, 2026
Google search engine

Homeಸ್ಥಳೀಯಮಲೇಷಿಯಾದಲ್ಲಿ ಚಿನ್ನ ಗೆದ್ದ ಕೆ.ಆರ್.ನಗರದ ಗೀತಾಂಜಲಿ

ಮಲೇಷಿಯಾದಲ್ಲಿ ಚಿನ್ನ ಗೆದ್ದ ಕೆ.ಆರ್.ನಗರದ ಗೀತಾಂಜಲಿ

ಕೆ.ಆರ್.ನಗರ : ಮಲೇಷಿಯಾದ ಕೌಲಾಲಂಪುರದಲ್ಲಿ ಜನವರಿ 17 ರಿಂದ 20 ರವರೆಗೆ ನಡೆದ 2026ನೇ‌ಸಾಲಿನ ಇಂಡೋ ಮಲೇಷಿಯಾ ಅಂತರ ರಾಷ್ಟ್ರೀಯ ಮಟ್ಟದ ಯೋಗಾ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪಟ್ಟಣದ ಆಂಜನೇಯ ಬಡಾವಣೆಯ ನಿವಾಸಿ ಗೀತಾಂಜಲಿಮಣಿಕಂಠ ಪ್ರಥಮ ಸ್ಥಾನ ಪಡೆಯು ವುದರೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಪಟ್ಟಣದ ಸಂತ ಜೋಸೇಫರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ನಿರಂತರ ಸಾಧನೆಯಿಂದ‌ ಈ ವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ ಮತ್ತು ಪದಕವನ್ನು ಗಳಿಸಿದ್ದಾರೆ.
ಈಗ ಅಂತರ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 35 ರಿಂದ 40 ವರ್ಷ ವಯೋಮಿತಿಯ ಮಹಿಳಾ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ದೇಶದ ಕೀರ್ತಿಯನ್ನು ಮುಗಿಲ್ಲೇತ್ತರಕ್ಕೆ ಏರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೀತಾಂಜಲಿಯವರು ಕೆ.ಆರ್.ನಗರದ ಸುಮುಖ ಯೋಗಾ ಕೇಂದ್ರದ ಶಿಕ್ಷಕರಾದ ರೇವಣ್ಣ ಮತ್ತು ಯೋಗಮಣಿಯವರ ಮಾರ್ಗದರ್ಶನದಲ್ಲಿ‌ ಯೋಗಾಭ್ಯಾಸ ಮಾಡಿ ಈಗ ಭಾರತದ ಕೀರ್ತಿ ಪತ್ತಾಕೆ ಆರಿಸಿದ್ದು ಈಗ ಇತರರಿಗೆ ಮಾದರಿಯಾಗಿದ್ದಾರೆ.
ಅಭಿನಂದನೆ : ಅಂತರ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ ಗೀತಾಂಜಲಿ ಮಣಿಕಂಠ ಅವರನ್ನು‌ ನಗರದ ಜನತೆ ಸಾಧನೆಯನ್ನು ಕೊಂಡಾಡಿದ್ದಾರೆ.

ಕೆ.ಆರ್.ನಗರ : ಪಟ್ಟಣದ ಕೆಎಸ್ ಆರ್ ಟಿಸಿ ಬಸ್ಸ್ ನಿಲ್ದಾಣದ ಶೌಚಾಲಯದ ಪಕ್ಕ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾವಿಗೆ‌ ನಿಕರ ಕಾರಣ ತಿಳಿದು ಬರದಿರುವುದರಿಂದ ಇದು ಹಲವು ಅನುಮಾನಕ್ಕೆ ಎಡೆ‌ಮಾಡಿಕೊಟ್ಟಿದೆ.
ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಶೌಚಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಸ್ಸ್ ನಿಲ್ದಾಣದ ಸಂಚಾರ ನಿಯಂತ್ರಿಕರಿಗೆ ತಿಳಿಸಿದ್ದು ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್ ಪಟ್ಟಣದ ಸಾರ್ವಜನಿಕ ಶವಗಾರಕ್ಕೆ ಸಾಗಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular