ಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟಕ್ಕೆ ನಟಿ ಲೀಲಾವತಿ ಪುತ್ರ ನಟ ವಿನೋದ್ ರಾಜ್ ಸಾಥ್ ನೀಡಿ ಕಾವೇರಿಯ ವಿಷಯದಲ್ಲಿ ಕಾವು ಏರದ ಹಾಗೆ ತೀರ್ಪು ಕೊಡಿ. ನೀವು ಕೊಡುವ ತೀರ್ಪು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವಾಗಬಾರದು ಎಂದು ಪ್ರತಿಕ್ರಿಯಿಸಿದರು.
ನಂತರ ಮಾತನಾಡಿ ನಿರಂತರವಾಗಿ ರೈತರು ಹೋರಾಟ ಮಾಡ್ತಿದ್ದಾರೆ. ಹೋರಾಟ ಯಾರ ಕಿವಿಗೂ ಮುಟ್ಟಲಿಲ್ವಾ? ಹೋರಾಟಕ್ಕೆ ಬೆಲೆ ಇಲ್ವಾ? ನೀರೆಲ್ಲಾ ತಮಿಳುನಾಡಿಗೆ ಹರಿದು ಹೋಗಿದೆ. ಮಳೆ ಬಂದಾಗ ಮರೆಯುವುದಲ್ಲ. ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಮಾತನಾಡ್ತಾರೆ.ಅದನ್ನ ಸರಿ ಮಾಡಬೇಕು. ಇವಾಗ ಯಾರು ಬೆಳೆ ಬೆಳೆಯಲು ಸಾಧ್ಯವಾಗಲ್ಲ.
ಸಂಕ್ರಾಂತಿ ಮೇಲೆನೆ ಬಿತ್ತನೆ ಕಾರ್ಯ. ಮಳೆಗಾಲದ ಬೆಲೆ ಹೊರಟುಹೊಯ್ತು. ನಮ್ಮ ತೋಟಗಳು ಸಹ ಸುಟ್ಟುಹೋಗಿದೆ. ಎಷ್ಟು ಎಕ್ಟೆರ್ ಲಾಸ್ ಹಾಗಿದೆ ಏನು ಮಾಡಬಹುದು ಅನ್ನೋದನ್ನ ಸರ್ಕಾರ ಮಾಡಬೇಕು. ಸಿದ್ದರಾಮಯ್ಯ ಮಾಡ್ತಾರೆ ಅನ್ನೊ ಭರವಸೆ ಇದೆ. ಡಿಕೆಶಿ ಅವರು ಕೂಡ ಮಾಡ್ತಾರೆ. ನೀರಿನ ಸಮಸ್ಯೆ ಸರಿ ಪಡಿಸುವ ಕೆಲಸ ಮಾಡಬೇಕು. ನಮಗೆ ಕುಡಿಯಲು ನೀರಿಲ್ಲ ಹೇಗೆ ಕೊಡೋದು. ಭಗವಂತ ವರುಣ ಕರುಣೆ ತೋರಿದರೆ ಮಾತ್ರ ಮಳೆ. ಕೆಲವು ಕಡೆ ಅತಿವೃಷ್ಟಿ ಅನಾವೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಕಡೆ ಗಮನ ಹರಿಸಬೇಕು. ರೈತರು ದಿನಕೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಂತರ ಕಾವೇರಿ ವಿಚಾರದಲ್ಲಿ ಚಿತ್ರರಂಗದ ಮೌನ ವಿಚಾರ ಕುರಿತು ನಟ ವಿನೋದ್ ರಾಜ್ ಮಾತನಾಡಿ ನೋ ಕಾಮೆಂಟ್ , ಅಭಿಮಾನಿಗಳು ನಮ್ಮ ಚಿತ್ರ ನೋಡಿ ಮೆಚ್ಚಿದ್ದಾರೆ. ನಮಗೆ ಅಭಿಮಾನಿಗಳು ಯಶಸ್ಸು ತಂದುಕೊಟ್ಟಿದ್ದಾರೆ. ತಾಯಿ ಇರುವ ತನಕ ನನ್ನ ಉಳಿಸಪ್ಪ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಎಲ್ಲರಿಗೂ ಅರ್ಥವಾಗಬೇಕು ಒಬ್ಬರಿಗೊಬ್ಬರು ಹಾಗಬೇಕು ಎಂದರು.