ಮೈಸೂರು: ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ನಿಗದಿಯಾಗಿರುವ ಬೆಲೆಯನ್ನು ರೈತರಿಗೆ ತಲುಪಿಸಲು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕಬ್ಬು ಕಾರ್ಖಾನೆಯ ನಿರ್ವಾಹಕರು ಮತ್ತು ರೈತ ಮುಖಂಡರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ರೈತರಾಗುತ್ತಿರುವ ತೊಂದರೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. ರೈತರು ಬೆಳೆಯುತ್ತಿರುವ ಕಬ್ಬಿಗೆ ಉತ್ತಮ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ನಿಗದಿಯಾಗಿರುವ ಸಂಪೂರ್ಣ ಹಣವನ್ನು ರೈತರಿಗೆ ನೀಡಬೇಕೆಂದು. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳು ದ್ವಿಪಕ್ಷ ಒಪ್ಪಂದದಲ್ಲಿ ಅಗತ್ಯವಾದ ಅಂಶಗಳನ್ನು ಸೇರಿಸಲು ಕ್ರಮವಹಿಸಬೇಕು ಮತ್ತು ಎಕ್ಸ್ ಫೀಲ್ಡ್ ರೀತಿ ರೈತರ ಜಮೀನಿನಲ್ಲಿ ಕಾರ್ಖಾನೆಯವರು ನೇರವಾಗಿ ಕಬ್ಬನ್ನು ಕಟಾವು ಮಾಡಬೇಕು. ಕಟಾವು ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕಟಾವು ಮಾಡುವ ಕಾರ್ಖಾನೆ ಅಥವಾ ವ್ಯವಸ್ಥಾಪಕರು ನೇರವಾಗಿ ಕೂಲಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲು ನಿಗದಿಪಡಿಸಲಾಗಿದೆ. ಕಬ್ಬು ಬೆಳೆಗೆ ಸಂಬಂದಿಸಿದಂತೆ ಸರ್ಕಾರದಿಂದ 150 ರೂಪಾಯಿಗಳ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಆ ಹಣವನ್ನು ಸಂಬೋಧಿತ ರೈತರ ಖಾತೆಗೆ ಶೀಘ್ರದಲ್ಲಿ ಜಮೆ ಮಾಡ ಕಾರ್ಖಾನೆ ನಿರ್ವಾಹಕ ಮಂಡಳಿಗೆ ಸೂಚಿಸಲಾಯಿತು. ಸಭೆಯಲ್ಲಿ ರೈತ ಮುಖಂಡರು ಮಾತನಾಡಿ ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗೆ 15 ಕಿಲೋಮೀಟರ್ ಅಂತರವಿರಬೇಕು ಎಂಬ ಅಂಶವನ್ನು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲಿಸದೆ ರೈತರಿಗೆ ತೊಂದರೆಯಾಗುತ್ತಿದೆ. ಕಬ್ಬಿನ ಬೆಳೆಯನ್ನು ೧೨ ರಿಂದ ೧೪ ತಿಂಗಳ ಒಳಗಡೆ ಕಟಾವು ಮಾಡಬೇಕಾಗಿದೆ ಆದರೆ ಕಟಾವಿನ ಸಂದರ್ಭದಲ್ಲಿ ಕೂಲಿ ಆಳುಗಳ ಕೊರತೆಯು ನಮಗೆ ಹೆಚ್ಚಿನದಾಗಿದೆ. ಕಬ್ಬು ಕಡಿದ ನಂತರ ಕಾರ್ಖಾನೆಗಳಿಂದ ನ್ಯಾಯಯುತವಾದ ಬೆಲೆಗಳು ದೊರೆಯುತ್ತಿಲ್ಲ, ರೈತರಿಗೆ ತುಂಬಾ ಸಮಸ್ಯೆಗಳಾಗುತ್ತವೆ. ನಿಯಮಸಾರವಾಗಿ ಕಬ್ಬು ಖರೀದಿ ಮಾಡಿದ 14 ದಿನದ ಒಳಗಡೆ ರೈತರಿಗೆ ಹಣ ಪಾವತಿ ಮಾಡಬೇಕು ಅಧಿಕಾರಿಗಳು ನಿರ್ಲಕ್ಷದಿಂದ ತಿಂಗಳವರೆಗೆ ರೈತರಿಗೆ ಕಬ್ಬಿನ ಹಣ ದೊರೆಯುತ್ತಿಲ್ಲ, ಮುಂದಿನ ದಿನಗಳಲ್ಲಿ ಪ್ರತಿ ಟನ್ ಕಬ್ಬಿಗೆ ಬಾಕಿ ಇರುವ 150 ಬೆಂಬಲ ಬೆಲೆಯನ್ನು ತಕ್ಷಣವೇ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ ಸೇರಿ ವಿವಿಧ ತಾಲ್ಲೂಕು ರೈತ ಪ್ರತಿನಿಧಿ ಭಾಗವಹಿಸಿದ್ದರು.