ಹನೂರು: ವಿಧಾನ ಮಂಡಲ ಅಧಿವೇಶನದಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುವಂತೆ ಮನವಿ ಮಾಡಿದ್ದಾರೆ.
ಹನೂರು ಕ್ಷೇತ್ರ ಇತರೆ ಕ್ಷೇತ್ರಕ್ಕಿಂತ ಭೌಗೋಳಕವಾಗಿ ವಿಸ್ತೀರ್ಣ ಹೊಂದಿದ್ದು ಅರಣ್ಯದ ಅಂಚಿನಿಂದ ಕೂಡಿದೆ ಈ ಭಾಗದಲ್ಲಿ ಮಲೆ ಮಹದೇಶ್ವರಸ್ವಾಮಿ, ಸಿಂಷಾ ಮಾರಮ್ಮ,ಮಧ್ಯರಂಗನಾಥ, ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯ ಸೇರಿದಂತೆ ಹಲವು ಪ್ರಸಿದ್ಧ ದೇವಾಲಯಗಳು ಪ್ರವಾಸಿ ತಾಣಗಳು ಒಳಗೊಂಡಿದೆ. ಹೀಗಾಗಿ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ನೀಡಬೇಕು ಎಂದು ಮನವಿ ಮಾಡಿದರು.
ಅರಣ್ಯದಂಚಿನಲ್ಲಿ ಆನೆ, ಹುಲಿ ಇದೆ ಇತ್ತೀಚಿಗೆ ದಾಳಿ ಪರಿಣಾಮ ಒಬ್ಬ ಮೃತ ಹೊಂದಿದ್ದ ಹಿನ್ನಲೆ ಸಂತ್ವಾನ ಹೇಳಲಾಗಿದೆ, ವನ್ಯ ಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಎರಡು ಮೂರು ಕಡೆ ಪವರ್ ಸ್ಟೇಷನ್ ಆಗಬೇಕಿದ್ದು, ವೋಲ್ಟೇಜ್ ಸಾಕಾಗುತ್ತಿಲ್ಲ. 7ಗಂಟೆ ಸಂಪೂರ್ಣ ವಿದ್ಯುತ್ ಪೂರೈಕೆ ಆಗಬೇಕು ಇಲ್ಲವಾದರೆ ನೀರಾವರಿ ಸಮಸ್ಯೆ ಎದುರಾಗಲಿದ್ದು ರೈತರಿಗೆ ನಷ್ಟ ಉಂಟಾಗಲಿದೆ. ಕ್ಷೇತ್ರದಲ್ಲಿ ಎಲ್ಲಾ ರಸ್ತೆಗಳು ಹಾಳಾಗಿದೆ. ಹೆಚ್ಚಿನ ಅನುದಾನ ನೀಡುವ ಮೂಲಕ ದೊಡ್ಡ ಕ್ಷೇತ್ರವಾಗಿರುವುದರಿಂದ ಸಣ್ಣ ಕ್ಷೇತ್ರಗಳಿಗೆ ನೀಡುವ ಅನುದಾನವನ್ನು ದೊಡ್ಡ ಕ್ಷೇತ್ರಕ್ಕೆ ನೀಡಿದರೆ ಸಾಲದು ಪರಿಗಣಿಸಿ ನೆಚ್ಚಿನ ಅನುದಾನ ನೀಡುವಂತೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ.