Friday, April 18, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳು ತಮ್ಮ ಕಲಿಕೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ:ಬಿ.ಟಿ ಸಚ್ಚಿದಾನಂದ

ವಿದ್ಯಾರ್ಥಿಗಳು ತಮ್ಮ ಕಲಿಕೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ:ಬಿ.ಟಿ ಸಚ್ಚಿದಾನಂದ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಕಲಿಕೆಯ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಕರುನಾಡ ಜನಜಾಗೃತಿ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಟಿ.ಸಚ್ಚಿದಾನಂದ ಹೇಳಿದರು.

ಅವರು ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತ್ರಿಲೋಕ ಪ್ರಕಾಶನ ಮೂಲ ಕಲಾವೇದಿಕೆ, ಕರುನಾಡ ಜನ ಜಾಗೃತಿ ವಿಚಾರ ವೇದಿಕೆ, ಡಾ.ರಾಜಕುಮಾರ್, ಪಾರ್ವತಮ್ಮ, ಪುನೀತ್ ರಾಜಕುಮಾರ್ ಸ್ಮರಣಾರ್ಥ, ಸ್ವರ್ಗೀಯ ನವರತ್ನಮ್ಮ ಬೊಮ್ಮರಸಯ್ಯ ಹಾಗೂ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರುಗಳ ನೆನಪಿನೊಂದಿಗೆ ಆಯೋಜಿಸಿದ್ದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಾಲಾ – ಕಾಲೇಜುಗಳಲ್ಲಿ ಓದುವಾಗ ಶ್ರದ್ಧೆಯಿಂದ ಗುರುಗಳು ಹೇಳಿಕೊಡುವುದನ್ನು ಅರ್ಥೈಸಿಕೊಂಡು ಓದುವುದರ ಕಡೆಗೆ ತಮ್ಮ ಗಮನವನ್ನು ಹರಿಸಬೇಕು. ಆ ಮೂಲಕ ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸುವುದರೊಂದಿಗೆ ವಿದ್ಯೆ ಕಲಿಸಿದ ಗುರುಗಳು, ಹೆತ್ತವರು ಹಾಗೂ ಹುಟ್ಟಿದ ಊರಿಗೆ ಕೀರ್ತಿಯನ್ನು ತರಬೇಕು ಎಂದು ಕರೆ ನೀಡಿದರು.

ಡಾ.ರಾಜಕುಮಾರ್ ವೇದಿಕೆಯ ಎಸ್.ಬಿ.ಗುಣಚಂದ್ರಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.ಆ ಮೂಲಕ ಸಾಕ್ಷರತಾ ಸಮಾಜದ ಜೊತೆಗೆ ಸುಸಂಸ್ಕೃತವಾದ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ನಮ್ಮ ಸುತ್ತಮುತ್ತಲಲ್ಲಿರುವ ಯಾರೊಬ್ಬ ವಿದ್ಯಾರ್ಥಿಯು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದ್ದರೆ ಅಂಥವರನ್ನು ಗುರುತಿಸಿ ಉಳ್ಳವರು ಅವರ ಶಿಕ್ಷಣಕ್ಕೆ ಸಹಕಾರವನ್ನು ನೀಡಬೇಕು. ಜೊತೆಗೆ ನಮ್ಮೊಳಗಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುವ ಮೂಲಕ ಅವರುಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಿ.ಪಿ.ಕುಮಾರ್ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ, ವಿವಿಧ ತರಗತಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಮಹದೇವ್, ಉಪಾಧ್ಯಕ್ಷ
ಪಿ.ಗವೀಶ್ ಗೌಡ, ಶ್ರೀ ರಾಮಾಂಜನೇಯ ಸೇವಾ ಸಮಿತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಾಘವೇಂದ್ರ, ಪತ್ರಕರ್ತರಾದ ಕೆ.ಟಿ.ಮೋಹನ್ ಕುಮಾರ್, ಎಸ್.ಬಿ.ಬಸವರಾಜು, ಉಪನ್ಯಾಸಕರುಗಳಾದ ಅಶೋಕ್, ನಾಗರಾಜು, ಲಿಂಗರಾಜು, ಮಧುಕರ, ವಿಜಯನಾಯಕ, ಮಹದೇವ, ಗೀತಾ, ಆಶಾಮ್ಮ, ನಾಗರತ್ನ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular