ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ : ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಕ್ಕಳ ಮರಣವನ್ನು ತಪ್ಪಿಸಬಹುದು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ ಸಮುದಾಯ ಆಧಾರಿತ ಕಾರ್ಯ ಕ್ರಮಗಳ ವ್ಯವಸ್ಥಾಪಕರಾದ ಚಿನ್ನಮಹದೇವ ತಿಳಿಸಿದರು
ಸ್ವಾಮಿ ವಿವೇಕಾ ನಂದ ಯೂತ್ ಮೂವ್ ಮೆಂಟ್ ಸರಗೂರು ಆಶ್ರಯ ಹಸ್ತ ಟ್ರಸ್ಟ್ ಮತ್ತು ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಮುದಾಯದ ಸಹಯೋಗದೊಂದಿಗೆ ಹೆಚ್ ಡಿ ಕೋಟೆ ತಾಲೂಕು ಅಣ್ಣೂರು ಗ್ರಾಮ ಪಂಚಾಯಿತಿಯ ಪ್ರಭಾನಗರ ಹಾಡಿಯಲ್ಲಿ ಸೀಮಂತ ಕಾರ್ಯ ಕ್ರಮವನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ದೀಪಬೆಳಗಿಸಿ ಮಾತನಾಡಿದ ಚಿನ್ನ ಮಹಾದೇವ ಅವರು ಗಿರಿಜನರಲ್ಲಿ ಗರ್ಭ ಧರಿಸುವ ಪ್ರತಿಯೊಬ್ಬರಲ್ಲೂ ರಕ್ತ ಹೀನತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರತಿಯೊಬ್ಬರೂ ಹಸಿರು ತರಕಾರಿ, ನುಗ್ಗೆಸೊಪ್ಪು, ಪಪ್ಪಾಯಿ, ಮೊಳಕೆ ಕಾಳುಗಳು,ಮೊಟ್ಟೆಯನ್ನು ಸೇವಿಸುವುದರಿಂದ ರಕ್ತಹಿನತೆ ಯಿಂದ ಹೊರ ಬರಬಹುದು ಎಂದರು.
ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬರಬೇಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದರಿಂದ ತಾಯಿ ಮಗುವಿಗೆ ಆಗುವ ಅನಾಹುತ ತಪ್ಪಿಸಬಹುದು ನಿಮ್ಮ ಆರೋಗ್ಯದ ದೃಷಿಯಿಂದ ಸರ್ಕಾರ ಸಂಸ್ಥೆಗಳು ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು

ನಂತರ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪಿ.ಹೆಚ್.ಸಿ.ಓ. ರೇಣುಕಾ ಮಾತನಾಡಿ ಪ್ರತಿ ತಿಂಗಳು ಪಿ.ಹೆಚ್. ಸಿ. ಯಲ್ಲಿ 9ನೇ ಮತ್ತು 24 ನೇ ತಾರೀಖು ನಂದು ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲಾ ಗರ್ಭಿಣಿಯರು ಅಭಿಯಾನದಲ್ಲಿ ಭಾಗಿಯಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಆಸ್ಪತ್ರೆಯಲ್ಲಿ ಇರುವ ಸೇವೆಗಳನ್ನು ಪಡೆದುಕೊಳ್ಳಬೇಕು ಮತ್ತು ಹೆರಿಗೆ ನಂತರ 6 ತಿಂಗಳ ವರೆಗೆ ಎದೆ ಹಾಲನ್ನು ಮಾತ್ರ ಕುಡಿಸಬೇಕು, ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಕೊಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 15 ಜನರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಳ್ಳಯ್ಯ, ಆಶಾ ಕಾರ್ಯ ಕರ್ತೆ ಮೇಲ್ವಿಚಾರಕರಾದ ಜಯಮ್ಮ, ರೇಣುಕಾ, ವಿನೋಧ, ಅಂಗನವಾಡಿ ಕಾರ್ಯಕರ್ತೆ ಶೈಲಜಾ, ನಂಜನಾಯಕನಹಳ್ಳಿ ರಾಜಶೇಖರ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮಗಳ ಸಂಯೋಜಕರಾದ ರಾಜೇಶ್ ಎಂ, ಶಿವಲಿಂಗಹ್ಯಾಂಡಪೋಸ್ಟ್, ಆರೋಗ್ಯ ಕಾರ್ಯಕರ್ತೆಯಾದ ಭಾಗ್ಯಮ್ಮ, ಪುನೀತ್ ಹಾಡಿಯ ಯಜಮಾನರಾದ ರವಿ ಮುಖಂಡರಾದ ಪ್ರಕಾಶ, ಸೋಮಯ್ಯ ಮಹಿಳೆಯರು ಮಕ್ಕಳು ಇದ್ದರು.