Sunday, April 20, 2025
Google search engine

Homeರಾಜ್ಯಡಿ.23, 24 ರಂದು ಕೆನರಾ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಅಲೂಮ್ನಿ ಮೀಟ್

ಡಿ.23, 24 ರಂದು ಕೆನರಾ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಅಲೂಮ್ನಿ ಮೀಟ್

ಮಂಗಳೂರು(ದಕ್ಷಿಣ ಕನ್ನಡ): ಕೆನರಾ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಅಲೂಮ್ನಿ ಮೀಟ್ ಇದೇ ಡಿಸೆಂಬರ್ 23 ಮತ್ತು 24 ರಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.

ಡಿಸೆಂಬರ್ 23 ಮತ್ತು 24 ರಂದು ಎರಡು ದಿನ ಕೆನರಾ ಬ್ಯಾಂಕ್ ಪ್ರಾಯೋಜಿತ ಎಕ್ಸಪೋ (ವಸ್ತು ಪ್ರದರ್ಶನ ಮತ್ತು ಮಾರಾಟ ) ನಡೆಯಲಿದೆ. ಅಲ್ಲಿ 25 ಸ್ಟಾಲ್ ಗಳಲ್ಲಿ ಸ್ಟಾಟ್ ಅಪ್ಸ್, ನೂತನ ತಂತ್ರಜ್ಞಾನ, ಹೊಸ ಅವಿಷ್ಕಾರಗಳು, ಮಾಹಿತಿ ಕೇಂದ್ರಗಳು, ಆಹಾರ ಮತ್ತು ಪಾನೀಯಗಳ ಮಳಿಗೆಗಳು, ಸ್ವರ್ಣೋದ್ಯಮದಿಂದ ಹಿಡಿದು ಗೃಹಬಳಕೆಯ ವಸ್ತುಗಳ ತನಕ ಕೆನರಾ ಹಳೆ ವಿದ್ಯಾರ್ಥಿಗಳ ಉದ್ಯಮಗಳ ಸ್ಟಾಲ್ ಗಳು ಜನರಿಗಾಗಿ ತೆರೆದಿರುತ್ತವೆ. ಎರಡು ದಿನ ಸಂಜೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 ಡಿಸೆಂಬರ್ 23 ರಂದು ಬೆಳಿಗ್ಗೆ ಎಕ್ಸಪೋ ಉದ್ಘಾಟನೆಗೊಳ್ಳಲಿದ್ದು, ಎರಡು ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ತೆರೆದಿರುತ್ತದೆ. ಡಿಸೆಂಬರ್ 24 ರಂದು ಬೆಳಿಗ್ಗೆ 10.30 ಕ್ಕೆ ಕೆನರಾ ವಸ್ತು ಸಂಗ್ರಹಾಲಯ ನೂತನ ಸ್ಪರ್ಶದೊಂದಿಗೆ ನವೀಕರಣಗೊಂಡಿದ್ದು, ಲೋಕಾರ್ಪಣೆಗೊಳ್ಳಲಿದೆ.

ಈ ಎರಡೂ ದಿನಗಳ ಕಾರ್ಯಕ್ರಮಗಳಿಗೆ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು, ಯೋಗ್ಯ ನಾಗರಿಕರಾಗಿರುವ ಪ್ರತಿಯೊಬ್ಬರೂ ಭಾಗವಹಿಸಿ, ತಮ್ಮ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಲು ಇದು ಯೋಗ್ಯ ವೇದಿಕೆಯಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿ ವಿನಂತಿ ಮಾಡಿದೆ.

RELATED ARTICLES
- Advertisment -
Google search engine

Most Popular